ವಾಟ್ಸಪ್, ಸ್ಕೈಪ್, ಎಸ್ಎಮ್ಎಸ್, ಇ-ಮೇಲ್, ಫೋನ್ ಮೂಲಕ ತಲಾಖ್‌ಗೂ ಮಾನ್ಯತೆ

ಸೋಮವಾರ, 8 ಫೆಬ್ರವರಿ 2016 (17:20 IST)
ಮುಸ್ಲಿಮ್ ಮಹಿಳೆಯರ ಮೇಲಿನ ತಾರತಮ್ಯವನ್ನು ಕೊನೆಗಾಣಿಸುವ ಉದ್ದೇಶದಿಂದ ಇಸ್ಲಾಂ ಕಾನೂನನ್ನು ಪರೀಕ್ಷೆ ಮಾಡಬೇಕಿದೆ ಎಂಬ ಸುಪ್ರೀಂಕೋರ್ಟ್ ಆದೇಶ ಕಾನೂನುಬದ್ಧವಾಗಿ ಸೂಕ್ತವಲ್ಲ ಎಂದು ಅಖಿಲ ಭಾರತೀಯ ಮುಸ್ಲಿಂ ಮೈಯಕ್ತಿಕ ಕಾನೂನು ಮಂಡಳಿ ಹೇಳಿದೆ.

 
ಮುಸ್ಲಿಂ ಕಾನೂನು ಧರ್ಮದ ಅವಿಭಾಜ್ಯ ಅಂಗವಾಗಿರುವುದರಿಂದ ಸುಪ್ರೀಂಕೋರ್ಟ್ ಆದೇಶ ಕಾನೂನುಬದ್ಧವಲ್ಲ. ಸಂವಿಧಾನದ 25 ವಿಧಿಯ ಪ್ರಕಾರ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಮೂಲಭೂತ ಹಕ್ಕಾಗಿದೆ ಎಂದು ಮಂಡಳಿಯ ಹಿರಿಯ ಸದಸ್ಯರು ಮತ್ತು ವಕ್ತಾರರು ಆಗಿರುವ ಮೊಹಮ್ಮದ್ ಅಬ್ದುಲ್ ಖುರೇಶಿ ಹೇಳಿದ್ದಾರೆ.
 
ಇದ್ದತ್ ( ಕಾಯುವ ಅವಧಿ) ಮುಗಿದ ಮೇಲೆ ತಲಾಖ್ ಪಡೆದ ಮಹಿಳೆ ಎರಡನೆಯ ಮದುವೆಯಾಗುವ ಸ್ವಾತಂತ್ರ್ಯವನ್ನು ಪಡೆಯುತ್ತಾಳೆ.  ತಲಾಖ್ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳುವುದು ಅತ್ಯಗತ್ಯ. ತಲಾಖ್ ಪಡೆದ ಬಳಿಕ ಆಕೆ ಮತ್ತೊಂದು ಮದುವೆಯಾಗಲಾಗುವುದಿಲ್ಲ ಅಥವಾ ಅವಳನ್ನು ಕೋಣೆಯಲ್ಲಿ ಬಂಧಿಸಿಡಲಾಗುವುದು ಎಂಬ ನಿಯಮಗಳಿಲ್ಲ ಎಂದು ಅವರು ತಿಳಿಸಿದ್ದಾರೆ. 
 
ಟ್ರಿಪಲ್ ತಲಾಖ್ ಪದ್ಧತಿಯ ಬಗ್ಗೆ ಮಾತನಾಡಿದ ಅವರು ಒಂದು ಸಲ ತಲಾಖ್ ಹೇಳುವುದು ಅಥವಾ 3 ಸಲ ಹೇಳುವುದು- ಇವೆರಡರಲ್ಲಿ ಯಾವುದೇ ವ್ಯತ್ಯಾಶಗಳಿಲ್ಲ. ಸಿಂಗಲ್ ತಲಾಖ್ ಅಥವಾ ಟ್ರಿಪಲ್ ತಲಾಖ್ ಹೇಳಿದ ಬಳಿಕ ಬರುವ ಕಾಯುವ ಅವಧಿ(ಇದ್ದತ್) ಮುಗಿದ ಮೇಲೆ ಮಹಿಳೆ ಮುಕ್ತಳಾಗುತ್ತಾಳೆ. ಒಂದು ವೇಳೆ ತಾನು ತಪ್ಪು ನಿರ್ಧಾರ ಕೈಗೊಂಡೆ ಎಂದು ಪತಿಗೆ ಅನ್ನಿಸಿದರೆ ಇದ್ದತ್ ಅವಧಿಯಲ್ಲಿ ಆತ ತನ್ನ ಪತ್ನಿಯನ್ನು ಮರಳಿ ಪಡೆಯಬಹುದು ಎಂದು ಮೊಹಮ್ಮದ್ ಅಬ್ದುಲ್ ಖುರೇಶಿ ಸ್ಪಷ್ಟಪಡಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ