ಜಯಲಲಿತಾ ಪ್ರಕರಣದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಿಸಲು ತಮಿಳುನಾಡಿಗೆ ಅಧಿಕಾರವಿಲ್ಲ

ಸೋಮವಾರ, 27 ಏಪ್ರಿಲ್ 2015 (15:30 IST)
ಅಕ್ರಮ ಆಸ್ತಿ ಪ್ರಕರಣವನ್ನು ಎದುರಿಸುತ್ತಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ  ಕೇಸ್‌ನಲ್ಲಿ ವಿಶೇಷ ಪ್ರಬ್ಲಿಕ್ ಪ್ರಾಸಿಕ್ಯೂಟರ್‌ನ್ನು ತಮಿಳುನಾಡು ನೇಮಿಸಿದ್ದು ಅಸಿಂಧು ಎಂದು ಸುಪ್ರೀಂಕೋರ್ಟ್ ಹೇಳಿದೆ. 

ಭವಾನಿ ಸಿಂಗ್ ನೇಮಕ ದೋಷಪೂರಿತ ಎಂದಿರುವ ಅಗರ್ವಾಲ್ ಮತ್ತು ನ್ಯಾಯಮೂರ್ತಿ ಪ್ರಫುಲ್ಲ ಸಿ ಪಂತ್ ನೇತೃತ್ವದ ನ್ಯಾಯಪೀಠ ಅಕ್ರಮ ಆಸ್ತಿ ಪ್ರಕರಣದಲ್ಲಿ ಮತ್ತೆ ವಿಚಾರಣೆಯನ್ನು ಕೈಗೊಳ್ಳುವ ಅಗತ್ಯವಿಲ್ಲವೆಂದು ಹೇಳಿದೆ.  
 
ಜಯಲಲಿತಾ ಅವರ ಪ್ರಕರಣದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅನ್ನು ನೇಮಿಸುವ ಅಧಿಕಾರ ತಮಿಳುನಾಡು ಸರ್ಕಾರಕ್ಕೆ ಇಲ್ಲ. ಕರ್ನಾಟಕ ಸರ್ಕಾರವೇ ಎಸ್‌ಪಿಪಿ ನೇಮಕ ಮಾಡಬೇಕಿತ್ತು ಎಂದು ನ್ಯಾಯಮೂರ್ತಿ ಮಿಶ್ರಾ ಹೇಳಿದ್ದಾರೆ. 
 
ತಮಿಳುನಾಡು ಸರ್ಕಾರದಿಂದ ಎಸ್‌ಪಿಪಿ ಭವಾನಿ ಸಿಂಗ್ ನೇಮಕವನ್ನು ಪ್ರಶ್ನಿಸಿ ಡಿಎಂಕೆ ನಾಯಕ ಅನ್ಬಳಗನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಈ ನಿರ್ಧಾರಕ್ಕೆ ಬಂದಿದೆ. 

ವೆಬ್ದುನಿಯಾವನ್ನು ಓದಿ