ಗೌರವ ಕೊಡಲಿಲ್ಲ ಎಂದು ಬಾಲಕನ ಕೈ ಕತ್ತರಿಸಿ ಹಾಕಿದ ಗ್ರಾ.ಪಂಚಾಯಿತಿ ಅಧ್ಯಕ್ಷೆಯ ಪತಿ

ಗುರುವಾರ, 21 ಆಗಸ್ಟ್ 2014 (15:42 IST)
ಗ್ರಾಮ ಪಂಚಾಯತಿಯ ಅಧ್ಯಕ್ಷೆಯ ಪತಿಗೆ ಗೌರವ ಕೊಡಲಿಲ್ಲ ಎನ್ನುವ ಕಾರಣಕ್ಕೆ 17 ವರ್ಷ ಬಾಲಕನ ಕೈಯನ್ನು ಕತ್ತರಿಸಿದ ಘಟನೆ ವಿರುದುನಗರ್ ಜಿಲ್ಲೆಯ ನರೈಕುಡಿ ಗ್ರಾಮದಲ್ಲಿ ನಡೆದಿದೆ. 
 
ಪೊಲೀಸ್ ಮೂಲಗಳ ಪ್ರಕಾರ, ಪಂಚಾಯಿತಿ ಅಧ್ಯಕ್ಷೆ ದೇವಿಯವರ ಪತಿ ಕೃಷ್ಣನ್ ಎದುರುಗಡೆ ಬಂದಾಗ ನರೈಕುಡಿ ಗ್ರಾಮದ ನಿವಾಸಿಯಾದ ಕಾರ್ತಿಕ್ ಎದ್ದು ನಿಂತು ಗೌರವ ನೀಡಲಿಲ್ಲ. ನನಗೆ ಯಾಕೆ ಗೌರವ ಕೊಡುವುದಿಲ್ಲ ಎಂದು ಕೃಷ್ಣನ್ ಕಾರ್ತಿಕ್‌ಗೆ ಕೇಳಿದಾಗ ವಾಗ್ವಾದ ತಾರಕಕ್ಕೇರಿ ದ್ವೇಷದ ವಾತಾವರಣ ಮೂಡಿಸಿದೆ.  
 
ಕೃಷ್ಣನ್ ಬೆಂಬಲಿಗರು ತಮ್ಮ ಪುತ್ರನ ಮೇಲೆ ಹಲ್ಲೆ ನಡೆಸಬಹುದು ಎನ್ನುವ ಆತಂಕದಿಂದ ಕಾರ್ತಿಕ್ ತಾಯಿ, ಪುತ್ರನಿಗೆ ಕೆಲ ಕಾಲ ಗ್ರಾಮವನ್ನು ತೊರೆದು ಶಿವಗಂಗಾಗೆ ತೆರಳುವಂತೆ ಸಲಹೆ ನೀಡಿದ್ದಾಳೆ. 
 
ಕಾರ್ತಿಕ್ ಶಿವಗಂಗಾಗೆ ತೆರಳುವ ಸಂದರ್ಭದಲ್ಲಿ ಕೃಷ್ಣನ್ ಮತ್ತು ಆತನ ಸಹೋದರರಾದ ಕಣ್ಣನ್ ಮತ್ತು ಕುಮಾರ್ ಆತನನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ ಎಡಗೈಯನ್ನು ಕತ್ತರಿಸಿಹಾಕಿದ್ದಾರೆ.  
 
ರಸ್ತೆ ಬದಿಯಲ್ಲಿ ಪ್ರಜ್ಞೆಯನ್ನು ಕಳೆದುಕೊಂಡಿದ್ದ ಬಾಲಕನನ್ನು ನೋಡಿದ ಗ್ರಾಮಸ್ಥರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. 
 
ಮುಕ್ಕುಲಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ಮೂವರು ಆರೋಪಿಗಳಾಗಾಗಿ ಜಾಲ ಬೀಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ