ತಮಿಳುನಾಡು ಚುನಾವಣೆ: ಬಿಜೆಪಿ ಜತೆಗಿನ ಮೈತ್ರಿಗೆ ಜಯಾ ಗ್ರೀನ್ ಸಿಗ್ನಲ್?

ಸೋಮವಾರ, 15 ಫೆಬ್ರವರಿ 2016 (15:44 IST)
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿಯಾದರೂ ಹೆಚ್ಚಿನ ಸಾಧನೆಯನ್ನು ತೋರಲೇಬೇಕೆಂಬ ಛಲದೊಂದಿಗೆ ಸೂಕ್ತ  ಮೈತ್ರಿಗಾಗಿ ಪರದಾಡುತ್ತಿದ್ದ ಬಿಜೆಪಿಗೆ ಜಯಾ ನೇತೃತ್ವದ ಆಡಳಿತಾರೂಢ ಎಐಡಿಎಂಕೆ ಕಡೆಯಿಂದ ಸಕಾರಾತ್ಮಕ ಸಂಕೇತ ದೊರಕಿದೆ. 

 
ಮೈತ್ರಿಗೆ ಸಂಬಂಧಿಸಿದಂತೆ ಎರಡು ಪಕ್ಷಗಳ ನಡುವೆ ಉನ್ನತ ಮಟ್ಟದ ಚರ್ಚೆಗಳು ನಡೆಯುತ್ತಿದ್ದು, ಈ ಮೊದಲು 100 ಸೀಟುಗಳಿಗೆ ಡಿಮ್ಯಾಂಡ್ ಮಾಡಿದ್ದ ಬಿಜೆಪಿ, ಈಗ ಆ ಸಂಖ್ಯೆಯನ್ನು ತಗ್ಗಿಸಿ 60 ಸೀಟುಗಳ ಮೇಲೆ ಕಣ್ಣಿಟ್ಟಿದೆ ಎಂದು ಹೇಳಲಾಗುತ್ತಿದೆ.  
 
ಮೂಲಗಳ ಪ್ರಕಾರ ಏಕಾಂಗಿಯಾಗಿ ಚುನಾವಣೆಯನ್ನೆದುರಿಸುವ ನಿಲುವನ್ನು ಹೊಂದಿದ್ದ ಮುಖ್ಯಮಂತ್ರಿ ಜಯಲಲಿತಾ ಈಗ ತಮ್ಮ ನಿರ್ಧಾರವನ್ನು ಸಡಲಿಸಿದ್ದಾರೆ. ಮುಖ್ಯವಾಗಿ  ಕಾಂಗ್ರೆಸ್ ಮತ್ತು ಕರುಣಾನಿಧಿ ನೇತೃತ್ವದ ಡಿಎಂಕೆ ಮೈತ್ರಿ ಮರುಹುಟ್ಟು ಪಡೆದ ನಂತರ ಜಯಲಲಿತಾರಿಗೂ ಸ್ವಲ್ಪ ಮಟ್ಟಿಗೆ ನಡುಕ ಸುರುವಾಗಿದೆ ಎನ್ನಬಹುದು.
 
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗುಲಾಮ್ ನಬಿ ಆಜಾದ್ ಶನಿವಾರ ಎಮ್. ಕರುಣಾನಿಧಿಯವರನ್ನು ಭೇಟಿಯಾಗಿ ಮೂರು ವರ್ಷಗಳ ಹಿಂದೆ ಮುರಿದುಕೊಂಡಿದ್ದ ಮೈತ್ರಿಗೆ ಹೊಸಜೀವ ನೀಡಿ ವಿಧಾನಸಭಾ ಚುನಾವಣೆಯನ್ನು ಜತೆಯಾಗಿ ಎದುರಿಸುವ ನಿರ್ಧಾರವನ್ನು ಕೈಗೊಂಡಿದ್ದರು. 
 
ರಾಜ್ಯದಲ್ಲಿ ಹೆಚ್ಚಿನ ಪ್ರಭಾವವನ್ನು ಹೊಂದಿಲ್ಲದಿದ್ದರೂ ಎಡಪಕ್ಷಗಳು ಸಹ ವಿರೋಧಿ ಮೈತ್ರಿಕೂಟದೊಂದಿಗೆ ಕೈ ಜೋಡಿಸುವ ಸಾಧ್ಯತೆ ಇದೆ. 
 

ವೆಬ್ದುನಿಯಾವನ್ನು ಓದಿ