ಕಲಾಂ ಅಂತಿಮ ಯಾತ್ರೆ: ತಮಿಳುನಾಡಿನಲ್ಲಿ ಅಘೋಷಿತ ಬಂದ್

ಗುರುವಾರ, 30 ಜುಲೈ 2015 (10:18 IST)
ಇಂದು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಅಂತ್ಯ ಸಂಸ್ಕಾರ ನಡೆಯುತ್ತಿದ್ದು ಅವರ ತವರು ತಮಿಳುನಾಡಿನಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ಅಕ್ಷರಶಃ ಸ್ಥಬ್ಧವಾಗಿರುವ ತಮಿಳುನಾಡಿನಲ್ಲಿ ವಾಣಿಜ್ಯ ವಹಿವಾಟು  ಸಂಪೂರ್ಣ ಬಂದ್ ಆಗಿದೆ.
 
 
ಶಾಲಾ- ಕಾಲೇಜು, ಸರ್ಕಾರಿ ಕಚೇರಿಗಳು, ಖಾಸಗಿ ಸಂಸ್ಥೆಗಳಿಗೆ ರಜೆಯನ್ನು ಘೋಷಿಸಲಾಗಿದ್ದು, ಕೇಂದ್ರ ಸರ್ಕಾರದ ಕಚೇರಿಗಳು, ಬ್ಯಾಂಕ್‌ಗಳು ಸಹ ಇಂದು ತೆರಯಲ್ಪಡುವುದಿಲ್ಲ. ಅಂಗಡಿ ಮಗ್ಗಟ್ಟುಗಳು ಬಹುತೇಕ ಬಂದ್ ಆಗಿದ್ದು, ಬೀದಿಬದಿ ವ್ಯಾಪಾರಿಗಳ ಸಂಘ ಕೂಡ ಕಲಾಂ ಗೌರವಾರ್ಥ ಇಂದು ವ್ಯಾಪಾರಕ್ಕಿಳಿಯುತ್ತಿಲ್ಲ.
 
ತಮಿಳುನಾಡಿನಾದ್ಯಂತ ಎಲ್ಲಾ ಚಿತ್ರಮಂದಿರಗಳು ಇಂದು ಬಂದ್ ಆಗಿದ್ದು, ಯಾವುದೇ ಸಿನಿಮಾದ ಚಿತ್ರೀಕರಣ ಕೂಡ ನಡೆಯುತ್ತಿಲ್ಲ ಎಂದು ತಮಿಳುನಾಡು ಫಿಲ್ಮ ಛೇಂಬರ್ ಅಧಿಕೃತ ಮಾಹಿತಿ ನೀಡಿದೆ.
 
ಲಾರಿ ಮಾಲೀಕರು ಸಹ  ಮಧ್ಯಾಹ್ನ 3 ಗಂಟೆಗಳ ಕಾಲ ಲಾರಿಗಳನ್ನು ರಸ್ತೆಗಿಳಿಸದಿರಲು ನಿರ್ಧರಿಸಿದ್ದಾರೆ. ಪಾಂಡಿಚೇರಿಯಲ್ಲಿ ಸಹ ಸರ್ಕಾರಿ ರಜೆಯನ್ನು ಘೋಷಿಸಲಾಗಿದೆ. 
 
ತಮಿಳುನಾಡಿನ ರಾಜಧಾನಿ ಬೀದಿ ಬೀದಿಯಲ್ಲಿ ಕಲಾಂ ಭಾವಚಿತ್ರಗಳನ್ನಿಟ್ಟು ಮೇಣಬತ್ತಿಗಳನ್ನು ಹಚ್ಚಲಾಗಿದೆ. ಶ್ರದ್ಧಾಂಜಲ್ಲಿ ಸಲ್ಲಿಸಿ ದೊಡ್ಡ ದೊಡ್ಡ ಫಲಕಗಳನ್ನು ತೂಗು ಹಾಕಲಾಗಿದೆ. 

ವೆಬ್ದುನಿಯಾವನ್ನು ಓದಿ