ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಬಂದ್

ಶನಿವಾರ, 28 ಮಾರ್ಚ್ 2015 (12:25 IST)
ಕರ್ನಾಟಕ ಸರ್ಕಾರದ ಮೇಕೆದಾಟು ಯೋಜನೆಯನ್ನು ವಿರೋಧಿಸಿ ತಮಿಳುನಾಡಿನಾದ್ಯಂತ ಇಂದು ಬಂದ್ ಘೋಷಿಸಲಾಗಿದ್ದು, ಪ್ರತಿಭಟನೆಯಲ್ಲಿ ರೈತ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಭಾಗಿಯಾಗಿವೆ. 
 
ಬೆಳಗ್ಗೆ 6 ಗಂಟೆ ಯಿಂದ ಸಂಜೆ 6 ಗಂಟೆ ವರೆಗೆ ಬಂದ್‌ಗೆ ಕರೆ ನೀಡಲಾಗಿದ್ದು, ಪ್ರತಿಭಟನೆಯಲ್ಲಿ ರೈತ ಸಂಘಟನೆಗಳು ಪ್ರಮುಖ ಪಾತ್ರ ವಹಿಸಿವೆ. ಇದರ ಜೊತೆಗೆ ರಾಜಕೀಯ ಪಕ್ಷಗಳಾದ ಎಐಎಡಿಎಂಕೆ, ಡಿಎಂಕೆ, ಕಾಂಗ್ರೆಸ್ ಹಾಗೂ ಸಿಪಿಐಎಂ ಸೇರಿದಂತೆ ಇತರೆ ಪಕ್ಷಗಳೂ ಕೂಡ ಬಂದ್‌ನಲ್ಲಿ ತೊಡಗಿಕೊಂಡಿವೆ. 
 
ಬಂದ್ ಹಿನ್ನೆಲೆಯಲ್ಲಿ ತಮಿಳುನಾಡಿನ ಮುಖ್ಯ ನಗರಗಳಾದ ತಿರುವಳ್ಳೂರ್, ಕಾಂಚಿಪುರಂ, ಚೆನ್ನೈ, ಕೃಷ್ಣಗಿರಿ, ಧರ್ಮಪುರಿ ಸೇರದಂತೆ ಇತರೆಗೆ ತೀವ್ರ ಸ್ವರೂಪದ ಸ್ಥಿತಿ ಕಾಣಿಸಿಕೊಂಡಿಕೊಂಡಿರುವ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆಯನ್ನೂ ಒದಗಿಸಲಾಗಿದೆ. 
 
ಪ್ರತಿನಿತ್ಯ ತಮಿಳುನಾಡಿಗೆ ರಾಜ್ಯದಿಂದ 400 ಬಸ್ ಸಂಚರಿಸುತ್ತಿದ್ದವು. ಅಲ್ಲದೆ ತಮಿಳು ನಾಡಿನಿಂದಲೂ ಕೂಡ 150 ಬಸ್‌ಗಳಿಗೂ ಅದಿಕವಾಗಿ ಸಂಚರಿಸುತ್ತಿದ್ದವು. ಆದರೆ ಬಂದ್ ಹಿನ್ನೆಲೆಯಲ್ಲಿ ಉಭಯ ರಾಜ್ಯಗಳ ಬಸ್ ಸಂಚಾರ ಸ್ಥಗಿತಗೊಂಡಿದೆ. ಬಂದ್ ಮುಗಿದ ಬಳಿಕ ಬಸ್ ಸಂಚಾರ ಆರಂಭಿಸಲಾಗುವುದು ಎಂದು ಉಭಯ ರಾಜ್ಯಗಳ ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ರೈತರು ತಮಿಳುನಾಡಿನ ತಂಜಾವೂರು ಮತ್ತು ನಾಗಪಟ್ಟಣಂನಲ್ಲಿ ರೈಲು ತಡೆದು ಪ್ರತಿಭಟನೆಗಿಳಿದಿದ್ದಾರೆ. 
 
ಸರ್ಕಾರದ ಸಾರಿಗೆ ಇಲಾಖೆಯ ಈ ನಿರ್ಧಾರದಿಂದ ತಮಿಳುನಾಡಿನ ಸಾಕಷ್ಟು ಮಂದಿ ಪ್ರಯಾಣಿಕರು ನಗರದಲ್ಲಿಯೇ ಉಳಿಯಬೇಕಾದ ಪರಿಸ್ಥಿತಿ ಎದುರಾಗಿದ್ದು, ಪರದಾಡುವಂತಾಗಿದೆ. 
 
ಕರ್ನಾಟಕ ಸರ್ಕಾರವು ನಗರದ ತಮಿಳುನಾಡಿನ ಗಡಿ ಭಾಗದಲ್ಲಿರುವ ಮೇಕೆದಾಟು ಬಳಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟೆಯನ್ನು ನಿರ್ಮಿಸಲು ಮುಂದಾಗಿದ್ದು, ಜಲ ವಿದ್ಯತ್ ತಯಾರಿಕೆ ಯತ್ನದಲ್ಲಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ತಮಿಳುನಾಡು ಸಾರ್ವಜನಿಕರು, ರಾಜ್ಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಕಡಿಮೆಯಾಗಲಿದ್ದು, ಅದನ್ನು ನಿರ್ಮಿಸಬಾರದು ಎಂದು ಒತ್ತಾಯಿಸುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ