ವಿಶ್ವಾಸಮತಯಾಚನೆ: ಸ್ಪೀಕರ್ ಮೈಕ್ ಕಿತ್ತು, ಟೇಬಲ್ ಪುಡಿ ಪುಡಿ ಮಾಡಿದ ವಿಪಕ್ಷಗಳು

ಶನಿವಾರ, 18 ಫೆಬ್ರವರಿ 2017 (12:26 IST)
ತಮಿಳುನಾಡು ವಿಧಾನಸಭೆಯ ಸಭಾಪತಿ ಧನಪಾಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಿಪಕ್ಷಗಳು ಸ್ಪೀಕರ್ ಮುಂದಿದ್ದ ಮೈಕ್ ಕಿತ್ತುಹಾಕಿ, ಟೇಬಲ್ ಪುಡಿ ಪುಡಿ ಮಾಡಿದ ಘಟನೆ ವರದಿಯಾಗಿದೆ.
 
 ವಿಶ್ವಾಸಮತ ಯಾಚನೆಯಲ್ಲಿ ಯಾಕೆ ತರಾತುರಿ ಮಾಡಲಾಗುತ್ತಿದೆ. ರೆಸಾರ್ಟ್ ವಿಷಯ ಪ್ರಸ್ತಾಪಿಸಲು ಸಭಾಪತಿ ಯಾಕೆ ಬಿಡುತ್ತಿಲ್ಲ. ಚರ್ಚೆಗೆ ಅವಕಾಶ ಕೊಡದೆ ಮತದಾನಕ್ಕೆ ಯಾಕೆ ಅನುಮತಿ ನೀಡಲಾಗುತ್ತಿದೆ ಎಂದು ಡಿಎಂಕೆ ಮುಖಂಡ ಎಂ.ಕೆ.ಸ್ಟಾಲಿನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ವಿಶ್ವಾಸಮತಯಾಚನೆ ಮುಂದೂಡಿ ಚರ್ಚೆಗೆ ಅವಕಾಶ ಕೊಡಿ. ಪ್ರಜಾತಂತ್ರದಲ್ಲಿ ಪ್ರಜಾ ವ್ಯವಸ್ಥೆಗೆ ಅವಕಾಶ ನೀಡುವುದು ಅಗತ್ಯ ಎಂದು ಮಾಜಿ ಸಿಎಂ ಪನ್ನೀರ್ ಸೆಲ್ವಂ ಒತ್ತಾಯಿಸಿದ್ದಾರೆ.
 
ವಿಪಕ್ಷಗಳ ಮುಖಂಡರ ಸಲಹೆಗಳನ್ನು ಸಭಾಪತಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸದಸ್ಯರು ಸ್ಪೀಕರ್ ಮೈಕ್ ಕಿತ್ತು ಹಾಕಿ ಟೇಬಲ್ ಪುಡಿ ಪುಡಿ ಮಾಡಿದ್ದಾರೆ. ಟೇಬಲ್ ಮೇಲಿದ್ದ ಫೈಲ್‌ಗಳನ್ನು ಕಿತ್ತು ಹಾಕಿ ಕೋಪವನ್ನು ಹೊರಹಾಕಿದ್ದಾರೆ.
 
ಸದಸ್ಯರ ಗದ್ದಲದಿಂದ ವಿಚಲಿತರಾದ ಸ್ಪೀಕರ್ ಧನಪಾಲ್, ಕಲಾಪವನ್ನು ಒಂದು ಗಂಟೆ ಮುಂದೂಡಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ