ಹಣದ ಹೊಳೆ ನೋಡಿ ಚುನಾವಣೆಯನ್ನೇ ರದ್ದುಗೊಳಿಸಿದ ಚುನಾವಣಾ ಆಯೋಗ!

ಸೋಮವಾರ, 10 ಏಪ್ರಿಲ್ 2017 (09:27 IST)
ಚೆನ್ನೈ: ಮಾಜಿ ಮುಖ್ಯಮಂತ್ರಿ ಜಯಲಲಿತಾರಿಂದ ತೆರವಾದ ಆರ್ ಕೆ ನಗರ ಉಪಚುನಾವಣೆಯಲ್ಲಿ ಹಣದ ಹೊಳೆ ನಡೆಯುತ್ತಿರುವುದು ನೋಡಿ ಚುನಾವಣಾ ಆಯೋಗ ಚುನಾವಣೆಯನ್ನೇ ರದ್ದುಗೊಳಿಸಿದೆ.

 

ಏಪ್ರಿಲ್ 12 ಕ್ಕೆ ಇಲ್ಲಿ ಮತದಾನ ನಡೆಯಬೇಕಿತ್ತು. ಆದರೆ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ಇಲ್ಲಿ ಹಣ ಹಂಚುವಿಕೆ ಜೋರಾಗಿದ್ದು, ಆದಾಯ ತೆರಿಗೆ ಇಲಾಖೆಯೂ ಆಯೋಗಕ್ಕೆ ವರದಿ ನೀಡಿತ್ತು. ಈ ಎಲ್ಲಾ ಹಿನ್ನಲೆಯಲ್ಲಿ ಇಲ್ಲಿ ನಡೆಯಬೇಕಿದ್ದ ಚುನಾವಣೆಯನ್ನೇ ಆಯೋಗ ರದ್ದುಪಡಿಸಿದೆ.

 
ಪ್ರಮುಖ ರಾಜಕೀಯ ಪಕ್ಷಗಳು ಪಕ್ಷ ಬೇಧವಿಲ್ಲದೆ ಮತದಾರರಿಗೆ ಬೇಕಾ ಬಿಟ್ಟಿ ಹಣ ಹಂಚುತ್ತಿರುವುದು ಬೆಳಕಿಗೆ ಬಂದಿದೆ. ಇದನ್ನು ಕೆಲವು ಸುದ್ದಿ ಮಾಧ್ಯಮಗಳು ಬಿತ್ತರಿಸಿದ್ದವು. ಅದರ ವರದಿ ಪ್ರಕಾರ, ಜನ ತಮ್ಮ ಕೆಲಸ ಹೋದರೂ, ಪರವಾಗಿಲ್ಲ ಎಂದು ರಾಜಕೀಯ ಪಕ್ಷಗಳು ನೀಡುವ ದುಡ್ಡಿಗಾಗಿ ಕಾದುಕುಳಿತಿರುತ್ತಿದ್ದರಂತೆ! ಒಂದು ವೋಟಿಗೆ 4 ಸಾವಿರ ರೂ.ಗಳವರೆಗೂ ಬೆಲೆ ಕಟ್ಟಲಾಗುತ್ತಿತ್ತು ಎನ್ನಲಾಗಿದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ