ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ವಿರೋಧಿಸಿ ತಮಿಳುನಾಡು ಅರ್ಜಿ

ಮಂಗಳವಾರ, 18 ನವೆಂಬರ್ 2014 (17:35 IST)
ಚಾಮರಾಜನಗರದ ಮೇಕೆದಾಟು ಬಳಿ ಕಾವೇರಿ ನದಿಗೆ ಅಣೆಕಟ್ಟು ನಿರ್ಮಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿರುವುದರ ವಿರುದ್ಧ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ  ಮಧ್ಯಂತರ ಅರ್ಜಿಯನ್ನು ಸಲ್ಲಿಸಿದೆ. ಅಣೆಕಟ್ಟು ನಿರ್ಮಾಣದಿಂದ ತಮಿಳುನಾಡು ರೈತರಿಗೆ ಅನ್ಯಾಯವಾಗುತ್ತದೆ.

ಕಾವೇರಿ ಐತೀರ್ಪಿಗೆ ವಿರುದ್ಧವಾಗಿ ಕರ್ನಾಟಕ ನಡೆದುಕೊಳ್ಳುತ್ತಿದೆ ಎಂದು ತಮಿಳುನಾಡು ಸರ್ಕಾರ ಅರ್ಜಿಯಲ್ಲಿ ಪ್ರತಿಪಾದಿಸಿದೆ. ಕೇರಳ ಜೊತೆ ಮುಲ್ಲಪೆರಿಯಾರ್ ಅಣೆಕಟ್ಟಿನ ವಿವಾದವನ್ನು ಇತ್ಯರ್ಥ ವಿಷಯ ಎಂದು ಹೇಳಿದ ತಮಿಳುನಾಡು ಸರ್ಕಾರ, ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಬಳಿ ಎರಡು ಅಣೆಕಟ್ಟುಗಳನ್ನು ನಿರ್ಮಿಸುವ ಸರ್ಕಾರದ ಪ್ರಯತ್ನಕ್ಕೆ ತಡೆಯೊಡ್ಡುವುದಾಗಿ ಹೇಳಿದೆ.

ಮುಲ್ಲಪೆರಿಯಾರ್ ಅಣಎಕಟ್ಟು ಮತ್ತು ಮೇಕೆದಾಟು ಅಣೆಕಟ್ಟು ವಿಷಯಗಳ ಬಗ್ಗೆ ಅಸೆಂಬ್ಲಿ ಸೆಷನ್ ಕರೆಯಬೇಕೆಂದು ಕರುಣಾನಿಧಿ ಒತ್ತಾಯಕ್ಕೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಪನ್ನೀರ್‌ಸೆಲ್ವಂ, ಕರ್ನಾಟಕದ ಅಣೆಕಟ್ಟು ನಿರ್ಮಾಣ ತಡೆಗೆ ಮೊಕದ್ದಮೆ ದಾಖಲಿಸುತ್ತಿರುವುದಾಗಿ ತಿಳಿಸಿದ್ದರು. ಅವರು ತಿಳಿಸಿರುವಂತೆ ಇಂದು ಸುಪ್ರೀಂಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿಯನ್ನು ತಮಿಳುನಾಡು ಸಲ್ಲಿಸಿದೆ. 

ವೆಬ್ದುನಿಯಾವನ್ನು ಓದಿ