ತಮಿಳುನಾಡು ಶಾಸಕರ ಸಂಬಳ ಶೇ.100ರಷ್ಟು ಹೆಚ್ಚಳ.. ರೈತರಿಗಿಂತ ಸಂಬಳವೇ ಮುಖ್ಯವಾಯ್ತಾ..?

ಬುಧವಾರ, 19 ಜುಲೈ 2017 (17:14 IST)
ಸಾಲ ಮನ್ನಾಕ್ಕೆ ಒತ್ತಾಯಿಸಿ ತಮಿಳುನಾಡು ರೈತರು ಹೋರಾಟ ನಡೆಸುತ್ತಿದ್ದರೆ ಇತ್ತ ಶಾಸಕರಿಗೆ ಶೇ. 100ರಷ್ಟು ಸಂಭಾವನೆ ಹೆಚ್ಚಿಸಲಾಗಿದೆ. 50,000 ರೂ. ಇದ್ದ ಶಾಸಕರ ಸಂಭಾವನೆಯನ್ನ 1.05 ಲಕ್ಷಕ್ಕೆ ಏರಿಸಲಾಗಿದೆ.
 

 ಶಾಸಕರ ಪಿಂಚಣಿ ಸಹ 12,000 ರೂ.ನಿಂದ 20,000 ರೂ.ಗೆ ಏರಿಸಲಾಗಿದೆ. ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿ ಸಹ 2 ರಿಂದ 2.6 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ. ಮುಖ್ಯಮಂತ್ರಿ ಪಳನಿಸ್ವಾಮಿ ಬುಧವಾರ ವಿಧಾನಸಭೆಯಲ್ಲಿ ಈ ಘೋಷಣೆ ಮಾಡಿದ್ದಾರೆ.

ಆದರೆ, ತಮಿಳುನಾಡು ರೈತರು ದೆಹಲಿಯ ಜಂತರ್ ಮಂತರ್`ನಲ್ಲಿ ಸುದೀರ್ಘ ಪ್ರತಿಭಟನೆ ನಡೆಸಿದ್ದರು. ಅರೆಬೆತ್ತಲೆ, ಸತ್ತ ಇಲಿ ತಿನ್ನುವ ಮೂಲಕ ಪ್ರತಿಭಟನೆ ನಡೆಸಿದ್ದರು. ಆದರೆ, ರೈತರ ನೆರವಿಗೆ ಧಾವಿಸದ ಸರ್ಕಾರ ಶಾಸಕರ ಸಂಬಳವನ್ನ ಹೆಚ್ಚಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಒಡೆದು ಹೋಳಾಗಿರುವ ಆಡಳಿತ ಪಕ್ಷದ ಶಾಸಕರನ್ನ ಜೊತೆಯಲ್ಲೇ ಇಟ್ಟುಕೊಳ್ಳಲು ಸಂಬಳ ಹೆಚ್ಚಿಸಿದ್ದಾರೆ ಎಂದು ವಿಶ್ಲೇಷಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ