ತಾಂಜೇನಿಯಾ ವಿದ್ಯಾರ್ಥಿನಿ ಹಲ್ಲೆ: ಆಫ್ರಿಕನ್ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಶನಿವಾರ, 6 ಫೆಬ್ರವರಿ 2016 (13:21 IST)
ತಾಂಜೇನಿಯಾ ವಿದ್ಯಾರ್ಥಿಯ ಮೇಲೆ ನಡೆದ ಹಲ್ಲೆಯನ್ನು ವಿರೋಧಿಸಿ ಆಫ್ರಿಕಾ ಸೇರಿದಂತೆ ಇತರ ದೇಶಗಳ ವಿದ್ಯಾರ್ಥಿಗಳು ನಗರದ ಟೌನ್‌ಹಾಲ್ ಬಳಿ ತೀವ್ರ ಪ್ರತಿಭಟನೆ ನಡೆಸಿದ್ದಾರೆ. 
ಬೃಹತ್ ಪ್ರತಿಭಟನೆಯಲ್ಲಿ ನೂರಾರು ವಿದೇಶಿ ವಿದ್ಯಾರ್ಥಿಗಳು ಭಾಗಿಯಾಗಿದ್ದು ನೂರಾರು ಭಿತ್ತಿ ಚಿತ್ರಗಳನ್ನು ಪ್ರದರ್ಶಿಸಿದ್ದಾರೆ.ನಮಗೆ ನಿಮ್ಮ ಕೈಗಳು ಬೇಕು, ಕಲ್ಲುಗಳಲ್ಲ. ಒನ್ ರೇಸ್ ಹ್ಯೂಮನ್ ರೇಸ್, ಒನ್ ಬ್ಲಡ್, ರೆಡ್ ಬ್ಲಡ್, ರಕ್ಷಣೆ, ನಮಗೆ ನಿಮ್ಮ ಸಹಾಯ ಹಸ್ತ ಬೇಕು, ಮಾನವ ಜನಾಂಗ ಒಂದೇ  ಎಂದು ಮನವಿ ಮಾಡಿದ್ದಾರೆ. 
 
ಅಸೋಸಿಯೇಶನ್ ಆಫ್ ಆಫ್ರಿಕನ್ ಸ್ಟುಡೆಂಟ್ಸ್ ಸಂಘಟನೆ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ನಗರದಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ರಕ್ಷಣೆ ದೊರೆಯುತ್ತಿಲ್ಲ. ಆತಂಕದ ವಾತಾವರಣ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಂಜೇನಿಯಾ ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಫ್ರಿಕಾ ವಿದ್ಯಾರ್ಥಿಗಳ ಸಂಘಟನೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದೆ.

ವೆಬ್ದುನಿಯಾವನ್ನು ಓದಿ