ಕಾಂಗ್ರೆಸ್ ಸರಕಾರಗಳನ್ನು ಉರುಳಿಸಲು ಬಿಜೆಪಿಯಿಂದ ನೂರಾರು ಕೋಟಿ ವೆಚ್ಚ: ತರುಣ್ ಗೋಗೈ

ಮಂಗಳವಾರ, 29 ಮಾರ್ಚ್ 2016 (18:11 IST)
ರಾಜ್ಯಪಾಲರ ಮೂಲಕ ಸರಕಾರವನ್ನು ಕೆಡವಲು ಬಿಜೆಪಿ 100 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಿನ ವ್ಯಯ ಮಾಡುತ್ತಿದೆ ಎಂದು ಆಸ್ಸಾಂ ಮುಖ್ಯಮಂತ್ರಿ ತರುಣ್ ಗೋಗೈ ಆರೋಪಿಸಿದ್ದಾರೆ.
 
ಬಿಹಾರ್ ಚುನಾವಣೆಗೆ ಮುನ್ನ ಕಾಂಗ್ರೆಸ್ ಶಾಸಕ ಹಿಮಾಂತಾ ಬಿಸ್ವಾ ಸರ್ಮಾ ಅವರ ಬೆಂಬಲ ಪಡೆದು ಆಸ್ಸಾ ಸರಕಾರವನ್ನು ಉರುಳಿಸಲು ಬಿಜೆಪಿ ನೂರಾರು ಕೋಟಿ ರೂಪಾಯಿಗಳನ್ನು ವೆಚಚ್ ಮಾಡಿದೆ. ಆದರೆ, ಬಿಜೆಪಿಗೆ ಸರಕಾರ ಕೆಡವಲು ಸಾಧ್ಯವಾಗಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
 
ನಿನ್ನೆ ನಡೆದ ಆಸ್ಸಾಂ ಚುನಾವಣೆ ಪ್ರಚಾರದಲ್ಲಿ ಪ್ರಧಾನಿ ಮೋದಿ, ಮುಖ್ಯಮಂತ್ರಿ ತರುಣ್ ಗೋಗೈ ವಿರುದ್ಧ ವಾಗ್ದಾಳಿ ನಡೆಸಿರುವುದಕ್ಕೆ ಗೋಗೈ ಇಂದು ಪ್ರತಿಕ್ರಿಯೆ ನೀಡಿದ್ದಾರೆ.
 
ಕಾಂಗ್ರೆಸ್ ಸರಕಾರದಲ್ಲಿ ಸಚಿವರಾಗಿದ್ದ ಹಿಮಾಂತಾ 35 ಬಂಡಾಯ ಕಾಂಗ್ರೆಸ್ ಶಾಸಕರನ್ನು ಒಂದುಗೂಡಿಸಿ, ಅರುಣಾಚಲ್, ಉತ್ತರಾಖಂಡ್‌ನಂತೆ ಸರಕಾರ ಉರುಳಿಸಲು ಪ್ರಯತ್ನಿಸಿದ್ದರು ಎಂದು ಕಿಡಿಕಾರಿದ್ದಾರೆ. 
 
ರಾಜ್ಯಪಾಲ ಪದ್ಮನಾಭ ಆಚಾರ್ಯ ಅವರ ಬೆಂಬಲವಿಲ್ಲದೇ ಇದು ಸಾಧ್ಯವಿಲ್ಲವಾದ್ದರಿಂದ ಇದರಲ್ಲಿ ಅವರು ಭಾಗಿಯಾಗಿದ್ದಾರೆ. ಆದ್ದರಿಂದಲೇ ಕೇಂದ್ರ ಸರಕಾರ ತಾತ್ಕಾಲಿಕ ರಾಜ್ಯಪಾಲರ ನೇಮಕ ಮಾಡುತ್ತಿದೆ. ಆರೆಸ್ಸೆಸ್ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ರಾಜ್ಯಪಾಲರಾಗಿ ಕೇಂದ್ರ ಸರಕಾರ ನೇಮಕ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ