ಶಿಕ್ಷಕಿಯ ಮೇಲೆ ಒಂದೇ ಕುಟುಂಬದವರಿಂದ ನಿರಂತರ ಸಾಮೂಹಿಕ ಅತ್ಯಾಚಾರ

ಶುಕ್ರವಾರ, 12 ಫೆಬ್ರವರಿ 2016 (12:41 IST)
ಖಾಸಗಿ ಶಾಲಾ ಶಿಕ್ಷಕಿಯೊಬ್ಬರ ಮೇಲೆ ಮೂವರು ಸಹೋದರರು ಮತ್ತೆ ಅವರ ಸ್ನೇಹಿತ ಸೇರಿಕೊಂಡು ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರವೆಸಗಿದ ಘೋರ ಘಟನೆ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. 

ದೆಹಲಿ ಮೂಲದ ಅಂಗಡಿ ಮಾಲೀಕ, ಆತನ ಇಬ್ಬರು ಸಹೋದರು ಹಾಗೂ ಆತನ ಸ್ನೇಹಿತನ ಮೇಲೆ ಪೀಡಿತೆ ಪೋಷಕರು ದೂರು ದಾಖಲಿಸಿದ್ದಾಳೆ.
 
ನಿನ್ನೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಶಿಕ್ಷಕಿಯನ್ನು ಬಿ.ಕೆ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. 
ಹಿರಿಯ ವೈದ್ಯರು ಹೇಳಿರುವ ಪ್ರಕಾರ ಪೀಡಿತೆಯ ಗುಪ್ತಾಂಗಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. 
 
ಛತ್ರವಾಲಾ ಪ್ರದೇಶದ ನಿವಾಸಿಯಾಗಿರುವ ಆಕೆ ಸಾಗಿರುವ ಆಕೆ ಕಳೆದ ಎರಡು ವರ್ಷಗಳಿಂದ  ಫರಿದಾಬಾದ್‌‌ನ ಸುಖ್ದೇವ್ ನಗರದ ಅಂಗಡಿ ಮಾಲೀಕ, ದೆಹಲಿಯ ಗೋವಿಂದಪುರಿಯಲ್ಲಿರುವ ತನ್ನಿಬ್ಬರು ಸಹೋದರರು ಹಾಗೂ ಸ್ನೇಹಿತ ಜೊತೆಗೆ ಸೇರಿ ತನ್ನ ಮೇಲೆ ನಿರಂತರವಾಗಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ತನ್ನ ತಂದೆಗೆ ಕರೆ ಮಾಡಿ ತಿಳಿಸಿದ್ದಳು. . 
 
ಆಕೆ ಪ್ರಜ್ಞೆ ಮರಳಿದ ಮೇಲೆ ಹೇಳಿಕೆಯನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ