ವೇತನ ಹೆಚ್ಚಿಸದಿದ್ರೆ ಇಸ್ಲಾಂ ಧರ್ಮಕ್ಕೆ ಮತಾಂತರ: ಸರಕಾರಕ್ಕೆ ಶಿಕ್ಷಕರ ವಾರ್ನಿಂಗ್

ಗುರುವಾರ, 3 ಸೆಪ್ಟಂಬರ್ 2015 (19:15 IST)
ವೇತನ ಹೆಚ್ಚಳಕ್ಕಾಗಿ ಯಾವ ಮಟ್ಟಿಗೆ ಉದ್ಯೋಗಿಗಳು ಮುಂದುವರಿಯುತ್ತಾರೆ ಎನ್ನುವುದಕ್ಕೆ ಇಲ್ಲಿದೆ ಒಂದು ಆಘಾತಕಾರಿ ಉದಾಹರಣೆ. ಇಲ್ಲಿನ ಶಿಕ್ಷಕರು ಒಂದು ವೇಳೆ ವೇತನ ಹೆಚ್ಚಳಗೊಳಿಸದಿದ್ದಲ್ಲಿ ಇಸ್ಲಾಂಗೆ ಮತಾಂತರ ಹೊಂದುವುದಾಗಿ ಬೆದರಿಕೆಯೊಡ್ಡಿದ್ದಾರೆ. 
 
ಕಸ್ತೂರ್‌ಬಾ ಬಾಲಿಕಾಯ. ವಿದ್ಯಾಲಯದ ಅರೆಕಾಲಿಕ ಶಿಕ್ಷಕರು ಹಲವು ತಿಂಗಳುಗಳಿಂದ ವೇತನ ಹೆಚ್ಚಿಸುವಂತೆ ಅಡಳಿತ ಮಂಡಳಿಯ ಮೇಲೆ ಒತ್ತಡ ಹೇರುತ್ತಿದ್ದರೂ ಸರಕಾರ ಕ್ಯಾರೆ ಎನ್ನುತ್ತಿಲ್ಲವಂತೆ. 
 
ಶಾಲೆಯನ್ನು ಮುಚ್ಚಿ ಪ್ರತಿಭಟನೆ ನಡೆಸಿ ವೇತನ ಹೆಚ್ಚಿಸುವಂತೆ ಒತ್ತಾಯಿಸಿ ಸರಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಅಧಿಕಾರಿ ಮನವಿಗೆ ಸ್ಪಂದಿಸುತ್ತಿಲ್ಲ ಎನ್ನುವುದು ಶಿಕ್ಷಕರ ಗೋಳಾಗಿದೆ.
 
ಕಳೆದ 2014ರಲ್ಲಿ ಖಾಯಂ ಮತ್ತು ಅರೆಕಾಲಿಕ ಉರ್ದು ಶಿಕ್ಷಕರ ವೇತನವನ್ನು ಏಕಕಾಲಕ್ಕೆ ಹೆಚ್ಚಿಸಲಾಗಿದೆ. ಆದರೆ ಹಿಂದಿ ಮತ್ತು ಸಂಸ್ಕ್ರತ ಶಿಕ್ಷಕರ ಸಂಬಳವನ್ನು 7200 ರೂಪಾಯಿಗಳಿಂದ 5000 ರೂಪಾಯಿಗಳಿಗೆ ಕಡಿತಗೊಳಿಸಿ ಸರಕಾರ ಆದೇಶ ಹೊರಡಿಸಿದೆ.  
 
ಸರಕಾರದ ಕ್ರಮದಿಂದ ರೊಚ್ಚಿಗೆದ್ದ ಶಿಕ್ಷಕರು ಸರಕಾರಕ್ಕೆ ಡೆಡ್‌ಲೈನ್ ನೀಡಿದ್ದು, ನಿಗದಿತ ಗಡುವಿನೊಳಗೆ ವೇತನ ಹೆಚ್ಚಿಸದಿದ್ದಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದುವುದಾಗಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ