ಪುಸ್ತಕದ ಮುಖಪುಟ ನೋಡಿ ನಿರ್ಧರಿಸಬೇಡಿ: ತೇಜಸ್ವಿ ಯಾದವ್

ಶನಿವಾರ, 21 ನವೆಂಬರ್ 2015 (20:44 IST)
ಬಿಹಾರ್ ಉಪ ಮುಖ್ಯಮಂತ್ರಿಯಾಗಿ ನೇಮಕ ಮಾಡಿರುವುದಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್, ಕೇವಲ ಪುಸ್ತಕದ ಮುಖಪುಟ ನೋಡಿ ನಿರ್ಧರಿಸಬೇಡಿ. ಸಿಎಂ ನಿತೀಶ್ ಕುಮಾರ್ ನನ್ನ ಬಗ್ಗೆ ಹೆಮ್ಮೆ ಪಡುಪಡುವಂತೆ ಕಾರ್ಯನಿರ್ವಹಿಸಿ ತೋರಿಸುತ್ತೇನೆ ಎಂದು ಟೀಕಾಕಾರರಿಗೆ ಪ್ರತ್ಯುತ್ತರ ನೀಡಿದ್ದಾರೆ.  
 
ಬಿಹಾರ್ ಜನತೆ ನನ್ನ ಮೇಲೆ ವಿಶ್ವಾಸವಿಟ್ಟು ಆರಿಸಿದ್ದಾರೆ. ಅವರ ವಿಶ್ವಾಸಕ್ಕೆ ತಕ್ಕಂತೆ ನಡೆಯುತ್ತೇನೆ ಎಂದು ಭರವಸೆ ನೀಡಿದರು.
 
ಕೇವಲ ಪುಸ್ತಕದ ಮುಖಪುಟ ನೋಡಿ ಅಂತಿಮ ನಿರ್ಧಾರಕ್ಕೆ ಬರುವುದು ಸರಿಯಲ್ಲ. ಔಷಧಿಯೂ ಕಹಿಯಾಗಿರುತ್ತದೆ. ಆದರೆ, ಅದರ ಅಲ್ಪ ಸಮಯದ ನಂತರ ಅದರ ಲಾಭದ ಅರಿವಾಗುತ್ತದೆ ಎಂದಿದ್ದಾರೆ.
 
ಬಿಹಾರ್ ಬ್ರಾಂಡ್ ಮೌಲ್ಯ ಹೆಚ್ಚಾಗಲು ನಿರಂತರವಾಗಿ ಶ್ರಮಿಸುತ್ತೇನೆ. ನನ್ನನ್ನು ಉಪಮುಖ್ಯಮಂತ್ರಿಯಾಗಿ ನೇಮಕ ಮಾಡಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಸ್ವತಃ ಗರ್ವ ಪಡುವಂತೆ ಕಾರ್ಯನಿರ್ವಹಿಸುತ್ತೇನೆ ಎಂದರು.
 
ಮಾಜಿ ಬಿಜೆಪಿ ಸಂಸದ ನವಜೋತ್ ಸಿಂಗ್ ಸಿದ್ಧು ವ್ಯಂಗ್ಯವಾಗಿ ಟ್ವೀಟ್ ಮಾಡಿ, ಬಿಹಾರ್ ಉತ್ತಮ ಸರಕಾರ ಕಾರ್ಯನಿರ್ವಹಿಸಲು ಸಿದ್ದವಾಗಿದೆ. ಸುಶೀಲ್ ಮೋದಿಯಿಂದ ತೇಜಸ್ವಿ ಯಾದವ್ ಅವರ ಅಧಿಕಾರವಧಿಯಲ್ಲಿ ಬಿಹಾರ್ ಉತ್ತಮ ಅಭಿವೃದ್ಧಿ ಸಾಧಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
 
ರಾಘೋಪುರ್ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾದ ತೇಜಸ್ವಿ, ನಿತೀಶ್ ಕುಮಾರ್ ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ನೇಮಕ ಗೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ