ಪಾಕಿಸ್ತಾನದ ಸೊಸೆ ಸಾನಿಯಾರವರಿಂದ ವಿಶ್ವಾಸಾರ್ಹತೆ ನಿರೀಕ್ಷಿಸಬಹುದೇ? : ಬಿಜೆಪಿ

ಗುರುವಾರ, 24 ಜುಲೈ 2014 (11:29 IST)
ಹೊಸದಾಗಿ ರಚನೆಯಾಗಿರುವ ತೆಲಂಗಾಣ ರಾಜ್ಯದ  ರಾಯಭಾರಿಯಾಗಿ ಟೆನಿಸ್ ತಾರೆ ಸಾನಿಯಾ ಮಿರ್ಜಾರವರನ್ನು ಆಯ್ಕೆ ಮಾಡಿರುವ ಟಿಆರ್‌ಎಸ್ ಸರಕಾರದ ವಿರುದ್ಧ ಕಿಡಿಕಾರಿರುವ ಬಿಜೆಪಿ ನಾಯಕ ಕೆ ಲಕ್ಷ್ಮಣ್ ಪಾಕಿಸ್ತಾನದ ಸೊಸೆಯಾಗಿರುವ ಆಕೆಗೆ ನೀಡಿರುವ ಗೌರವಕ್ಕೆ ಅವರು ಬದ್ಧರಾಗಿರುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. 

ಸಾನಿಯಾರವರನ್ನು ರಾಯಭಾರಿಯಾಗಿ ನೇಮಿಸಿರುವ ಸರಕಾರ, ಈ ಕ್ರಮಕ್ಕೆ ಯಾವ ಮಾನದಂಡವನ್ನು ಅನುಸರಿಸಿದೆ ಎಂದು ಸರಕಾರ ಉತ್ತರಿಯಬೇಕು ಎಂದು ಅವರು ಆಗ್ರಹಿಸಿದ್ದಾರೆ. 
 
ಮಹಾರಾಷ್ಟ್ರದಲ್ಲಿ  ಹುಟ್ಟಿದ್ದ ಸಾನಿಯಾ ನಂತರ ಹೈದರಾಬಾದಿಗೆ ಬಂದು ನೆಲೆಸಿದ್ದರು. ಆದ್ದರಿಂದ ಅವರು ಸ್ಥಳೀಯರೆನಿಸುವುದಿಲ್ಲ. ಈಗ ಪಾಕಿಸ್ತಾನದ ಕ್ರಿಕೆಟಿಗ ಶೊಯೆಬ್ ಮಲ್ಲಿಕ್‌ನನ್ನು ಮದುವೆಯಾಗಿರುವ ಅವರು ಪಾಕಿಸ್ತಾನದ ಸೊಸೆಯಾಗಿದ್ದಾರೆ ಎಂದು ಬಿಜೆಪಿ ಹೇಳಿದೆ. 
 
27 ವರ್ಷದ ಟೆನಿಸ್ ಆಟಗಾರ್ತಿ ತೆಲಂಗಾಣ ಪ್ರತ್ಯೇಕ ರಾಜ್ಯ ಚಳವಳಿಯಲ್ಲಿ ಒಮ್ಮೆಯೂ ಭಾಗವಹಿಸಿರಲಿಲ್ಲ ಎಂದು ತೆಲಂಗಾಣ ವಿಧಾನಸಭೆಯ ಬಿಜೆಪಿ ಮುಖಂಡ ಲಕ್ಷ್ಮಣ್ ಹೇಳಿದ್ದಾರೆ.
 
ಬರುತ್ತಿರುವ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತಗಳ ಮೇಲೆ  ಕಣ್ಣಿಟ್ಟಿರುವ ಸರ್ಕಾರ  ಈ ಹೆಜ್ಜೆಯನ್ನಿರಿಸಿದೆ ಎಂದು ಲಕ್ಷ್ಮಣ್ ಆರೋಪಿಸಿದ್ದಾರೆ.  
 
 ಟೆನ್ನಿಸ್ ಆಟಗಾರ್ತಿ ಸಾನಿಯರವರನ್ನು ರಾಜ್ಯದ ರಾಯಭಾರಿಯಾಗಿ ಘೋಷಿಸಿದ್ದಲ್ಲದೇ ಅವರಿಗೆ ಒಂದು ಕೋಟಿ ರೂಪಾಯಿ ಹಣ ನೀಡಿರುವ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್  ಸಾನಿಯಾ ಹೈದರಾಬಾದಿನ ಮಗಳು ಎಂದು ಬಣ್ಣಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ