ಬಾಯ್‌ಫ್ರೆಂಡ್‌ನನ್ನು ಥಳಿಸಿ ಯುವತಿಯ ಮೇಲೆ ಅತ್ಯಾಚಾರವೆಸಗಿದ ಕಾಮುಕರು

ಬುಧವಾರ, 6 ಮೇ 2015 (16:40 IST)
ನಗರದ ಹೊರವಲಯದಲ್ಲಿ ನಾಲ್ಕು ಮಂದಿ ಆರೋಪಿಗಳು 20 ವರ್ಷ ವಯಸ್ಸಿನ ಯುವತಿಯ ಬಾಯ್‌ಫ್ರೆಂಡ್‌ನನ್ನು ಥಳಿಸಿ ಯುವತಿಯ ಮೇಲೆ ಅತ್ಯಾಚಾರವೆಸಗಿದ ಘಟನೆ ವರದಿಯಾಗಿದೆ.

ಎನುಮಾಮುಲಾ ಗ್ರಾಮದ ನಿವಾಸಿಯಾದ ಕಾಲೇಜು ವಿದ್ಯಾರ್ಥಿನಿ ತನ್ನ ಬಾಯ್‌ಫ್ರೆಂಡ್‌ನೊಂದಿಗೆ ಬಾಲಾಜಿ ನಗರದಿಂದ ಎನುಮಾಮುಲಾ ಕೃಷಿ ಮಾರುಕಟ್ಟೆಯತ್ತ ಆಗಮಿಸುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಯುವತಿಯ ಮೇಲೆ ಅತ್ಯಾಚಾರವೆಸಗುವುದಕ್ಕಿಂತ ಮುಂಚೆ ಆರೋಪಿಗಳು ಯುವಕನನ್ನು ಮನಬಂದಂತೆ ಥಳಿಸಿದ್ದಾರೆ ಇಂತೇಜಾರ್‌ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಶಂಕಿತ ನಾಲ್ಕು ಆರೋಪಿಗಳನ್ನು ಪೊ1ಲೀಸರು ವಶಕ್ಕೆ ತೆಗೆದುಕೊಂಡಿದ್ದು ವಿಚಾರಣೆ ಮುಂದುವರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ