ಐಸಿಎಸ್ ನೆರವು ಪಡೆದು ಜೈಲಿನಿಂದ ಪರಾರಿಯಾಗಲು ಸಂಚು ರೂಪಿಸಿದ ಯಾಸಿನ್ ಭಟ್ಕಳ್

ಶನಿವಾರ, 4 ಜುಲೈ 2015 (16:36 IST)
ಉಗ್ರಗಾಮಿ ಸಂಘಟನೆಯಾದ ಇಂಡಿಯನ್ ಮುಜಾಹಿದಿನ್ ಸಂಸ್ಥಾಪಕ ಯಾಸಿನ್ ಭಟ್ಕಳ್ ಭಾರಿ ಭದ್ರತೆಯಲ್ಲಿರುವ ಜೈಲಿನಿಂದ ತನ್ನ ಪತ್ನಿಗೆ ಕರೆ ಮಾಡಿರುವುದು ಭದ್ರತಾ ಅಧಿಕಾರಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
 
ಯಾಸಿನ್ ಭಟ್ಕಳ್ ಮೊಬೈಲ್ ಫೋನ್ ಮುಖಾಂತರ ತನ್ನ ಪತ್ನಿಗೆ ಕರೆ ಮಾಡಿ, ಐಎಸಿಎಸ್ ಸಂಘಟನೆಯ ನೆರವಿನಿಂದ ಶೀಘ್ರದಲ್ಲಿ ಜೈಲಿನಿಂದ ಹೊರಬರುತ್ತೇನೆ ಎಂದು ಹೇಳಿರುವುದು ಪೊಲೀಸರಿಗೆ ಆಘಾತ ಮೂಡಿಸಿದೆ.      
 
ಭಾರಿ ಭದ್ರತೆಯಲ್ಲಿರುವ ಜೈಲಿನಲ್ಲಿ ಯಾಸಿನ್‌ಗೆ ಮೊಬೈಲ್ ಫೋನ್ ದೊರೆತಿದ್ದಾದರೂ ಹೇಗೆ ಎನ್ನುವ ಪ್ರಶ್ನೆ ಭದ್ರತಾ ಅಧಿಕಾರಿಗಳಿಗೆ ಕಾಡುತ್ತಿದೆ. ಪ್ರಕರಣದ ವಿಚಾರಣೆ ನಡೆಸಿದ ಅಧಿಕಾರಿಗಳು ಕಳೆದ ಒಂದು ತಿಂಗಳಿನ ಹಿಂದೆ ಮೊಬೈಲ್ ಫೋನ್‌ನ್ನು ಕೈದಿಗಳು ಜೈಲಿಗೆ ತರಿಸಿಕೊಂಡಿರುವುದು ಪತ್ತೆಯಾಗಿದೆ. ಭಟ್ಕಳ್ ಸೇರಿದಂತೆ ಇತರ ಅಪರಾಧಿಗಳು ಕೂಡಾ ಮೊಬೈಲ್ ಬಳಸುತ್ತಿರುವುದು ಬಹಿರಂಗವಾಗಿದೆ.  
 
ಕಳೆದ 2013ರಲ್ಲಿ ಭಾರತ-ನೇಪಾಳದ ಗಡಿಯಾದ ಬಿಹಾರ್‌ ರಾಜ್ಯದಲ್ಲಿ ಯಾಸಿನ್ ಭಟ್ಕಳ್ ಅಲಿಯಾಸ್ ಮುಹಮ್ಮದ್ ಅಹ್ಮದ್ ಝರಾರ್ ಸಿದ್ದಿಬಾಪಾನನ್ನು ಬಂಧಿಸಲಾಗಿತ್ತು. ಆರೋಪಿ ಭಟ್ಕಳ್ ಕರ್ನಾಟಕದ ಉತ್ತರ ಕನ್ನಡ ಮೂಲದವನಾಗಿದ್ದು 2008ರಲ್ಲಿ ಸಹೋದರರಾದ ರಿಯಾಜ್ ಭಟ್ಕಳ್ ಮತ್ತು ಅಬ್ದುಲ್ ಸುಭಾನ್ ಖುರೇಶಿಯವರ ನೆರವಿನೊಂದಿಗೆ ಇಂಡಿಯನ್ ಮುಜಾಹಿದಿನ್ ಎನ್ನುವ ಉಗ್ರಗಾಮಿ ಸಂಘಟನೆ ಸ್ಥಾಪಿಸಿದ್ದ.  
 
ದೇಶದ ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ಕಳೆದ ಹಲವು ವರ್ಷಗಳಿಂದ ಯಾಸಿನ್ ಬಂಧನಕ್ಕಾಗಿ ಜಾಲ ಬೀಸಿದ್ದರು ಎನ್ನಲಾಗಿದೆ.
 
2010ರಲ್ಲಿ ನಡೆದ ಜರ್ಮನ್ ಬೇಕರಿ ಪ್ರಕರಣದಲ್ಲಿ ಭಟ್ಕಳ್ ಪ್ರಮುಖ ಆರೋಪಿಯಾಗಿದ್ದ. ಬೇಕರಿ ಹತ್ತಿರದಲ್ಲಿರುವ ಸಿಸಿಟಿವಿಯಲ್ಲಿ ಭಟ್ಕಳ್ ಚಹರೆ ದಾಖಲಾಗಿತ್ತು ಎಂದು ಎನ್‌ಐಎ ಮೂಲಗಳು ತಿಳಿಸಿವೆ.
 

ವೆಬ್ದುನಿಯಾವನ್ನು ಓದಿ