ಸರಕಾರಿ ಕಟ್ಟಡದಲ್ಲಿ ಅಡಗಿದ ಉಗ್ರರು: ಯೋಧರು, ಉಗ್ರರ ನಡುವೆ ಫೈರಿಂಗ್

ಶನಿವಾರ, 20 ಫೆಬ್ರವರಿ 2016 (18:36 IST)
ಸರಕಾರಿ ಕಟ್ಟಡದಲ್ಲಿ ಅಡಗಿರುವ ಉಗ್ರರು 50 ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿರುವ ಶಂಕೆಯಿದ್ದು, ಸಿಆರ್‌ಪಿಎಫ್ ಮತ್ತು ಉಗ್ರರ ನಡುವೆ ಗುಂಡಿನ ಕಾಳಗ ಮುಂದುವರಿದಿದೆ.
 
ಉಗ್ರರು ಅಡಗಿದ್ದ ಕಟ್ಟಡವನ್ನು ಸಿಆರ್‌ಪಿಎಫ್ ಯೋಧರು ಸುತ್ತುವರಿದಿದ್ದು, ಉಗ್ರರ ವಿರುದ್ಧ ಪ್ರತಿದಾಳಿ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಘಟನೆಯಲ್ಲಿ ಓರ್ವ ಯೋಧ ಮೃತನಾಗಿದ್ದಾನೆ. 11 ಯೋಧರಿಗೆ ಗಾಯಗಳಾಗಿದ್ದು, ಮೂವರು ಯೋಧರ ಸ್ಥಿತಿ ಗಂಭೀರವಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
 
ಉಗ್ರರು ಪಾಕಿಸ್ತಾನದಿಂದ ಕಾಶ್ಮಿರಕ್ಕೆ ನುಗ್ಗಿ ನಂತರ ಶ್ರೀನಗರದ ಪ್ಯಾಂಪೋರ್‌‌ನಲ್ಲಿರುವ ಸರಕಾರಿ ಕಟ್ಟಡದೊಳಗೆ ಪ್ರವೇಶಿಸಿದ್ದಾರೆ. ಉಗ್ರರ ವಿರುದ್ಧಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ