ಬಿಜೆಪಿ ಶಾಸಕನ ನಿವಾಸಕ್ಕೆ ನುಗ್ಗಿದ ಉಗ್ರರು: ಅಂಗರಕ್ಷಕನಿಂದ ಎಕೆ-47 ಕಿತ್ತುಕೊಂಡು ಪರಾರಿ

ಮಂಗಳವಾರ, 28 ಜೂನ್ 2016 (18:48 IST)
ಜಮ್ಮು ಕಾಶ್ಮಿರದ ಬುದಗಾಂವ್‌ನ ಛಾಡೋರಾ ಪ್ರದೇಶದಲ್ಲಿರುವ ಬಿಜೆಪಿ ಶಾಸಕನ ಮನೆಗೆ ನುಗ್ಗಿದ ಕೆಲ ಅಪರಿಚಿತ ಉಗ್ರರು ಅವರ ಅಂಗರಕ್ಷಕನ ಬಳಿಯಿದ್ದ ಎಕೆ-47 ರೈಫಲ್ ಕಿತ್ತುಕೊಂಡು ಪರಾರಿಯಾದ ಘಟನೆ ವರದಿಯಾಗಿದೆ.
 
ವರದಿಗಳ ಪ್ರಕಾರ, ಬಿಜೆಪಿ ಮುಖಂಡ ಅಬ್ದುಲ್ ರೆಹಮಾನ್ ಚೋಪನ್ ಮನೆಗೆ ನುಗ್ಗಿದ ಶಸ್ತ್ರಧಾರಿ ಉಗ್ರರ ತಂಡವನ್ನು ಅಬ್ದುಲ್ ತಡೆಯಲು ಯತ್ನಿಸಿದಾಗ ಅವರ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಅವರ ಅಂಗರಕ್ಷಕನ ಕೈಯಲ್ಲಿದ್ದ ಎಕೆ-47 ರೈಫಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.  
 
ಅಂಗರಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ಬಷೀರ್ ಅಹ್ಮದ್, ಪೊಲೀಸ್ ಠಾಣೆಗೆ ದೂರು ನೀಡಿ ನಾಲ್ಕು ಮಂದಿ ಶಸ್ತ್ರಧಾರಿಗಳ ತಂಡ ಚೋಪನ್ ಅವರ ಮನೆಗೆ ನುಗ್ಗಿ ಎಕೆ-47 ರೈಫಲ್ ಕಿತ್ತುಕೊಂಡಿದೆ ಎಂದು ದೂರು ನೀಡಿದ್ದಾರೆ. 
 
ಪೊಲೀಸರಿಗೆ ಉಗ್ರರ ತಂಡದ ಬಗ್ಗೆ ಕೆಲ ಸುಳಿವುಗಳು ದೊರೆತಿದ್ದು ಕಾರ್ಯಾಚರಣೆ ಆರಂಭಿಸಿದ್ದಾರೆ. ಬಿಜೆಪಿ ಮುಖಂಡ ಚೋಪನ್ ಮನೆಗೆ ಭಾರಿ ಪೊಲೀಸ್ ಬಂದೋಬಸ್ತ್  ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ