ಉಗ್ರರಿಂದ ದ್ರೋಣ ಬಳಕೆ ಸಾಧ್ಯತೆ: ಕೇಂದ್ರ ಸರಕಾರಕ್ಕೆ ಗುಪ್ತಚರ ಅಧಿಕಾರಿಗಳಿಂದ ಮಾಹಿತಿ

ಮಂಗಳವಾರ, 1 ಡಿಸೆಂಬರ್ 2015 (19:19 IST)
ಭಯೋತ್ಪಾದಕ ಗುಂಪುಗಳು ದ್ರೋಣ ಮೂಲಕ ದಾಳಿ ಮಾಡಬಹುದು ಎಂದು ಗುಪ್ತಚರ ಸಂಸ್ಥೆಗಳು ಕೇಂದ್ರ ಸರಕಾರಕ್ಕೆ ಮಾಹಿತಿ ನೀಡಿವೆ.
 
ಭಾರತದೊಳಗೆ ಮಾನವರಹಿತ ದ್ರೋಣಗಳನ್ನು ಬಳಸಿ ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಗುಪ್ತಚರ ಸಂಸ್ಥೆಗಳು ಮಾಹಿತಿಯನ್ನು ರವಾನಿಸಿದ್ದು ಉಗ್ರರ ದಾಳಿಯನ್ನು ಹಿಮ್ಮೆಟ್ಟಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಗೃಹ ಸಚಿವಾಲಯ ಸಂಸತ್ತಿಗೆ ಭರವಸೆ ನೀಡಿದೆ.
 
ಭಾರತೀಯ ವಾಯುನೆಲೆಯಲ್ಲಿ ಯುಎಎಸ್ ಮತ್ತು ಯುಎವಿ ಕಾರ್ಯಾಚರಣೆಗೆ ಪ್ರಮಾಣ ಪತ್ರ ನೀಡವ ಕಾನೂನು ಪ್ರಕ್ರಿಯೆಗೆ ಚಾಲನೆ ನೀಡಲು ನಾಗರಿಕ ವಿಮಾನಯಾನ ನಿರ್ದೇಶನಾಲಯ ಕಾರ್ಯೋನ್ಮುಖವಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. 
 
1993ರ ಮುಂಬೈ ಸರಣಿ ಸ್ಫೋಟದ ಆರೋಪಿ ದಾವುದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ನೆಲೆಸಿದ್ದಾನೆ ಎನ್ನುವುದಕ್ಕೆ ಹಲವು ಸಾಕ್ಷ್ಯಗಳು ಲಭ್ಯವಿವೆ. ತನ್ನ ವಾಸವನ್ನು ಒಂದು ನಗರದಿಂದ ಮತ್ತೊಂದು ನಗರಕ್ಕೆ ಬದಲಿಸುತ್ತಿರುತ್ತಾನೆ ಎಂದು ಗುಪ್ತಚರ ಅಧಿಕಾರಿಗಳು ತಿಳಿಸಿದ್ದಾರೆ.
 
ದಾವುದ್ ಇಬ್ರಾಹಿಂಗೆ ಸಂಬಂಧಿಸಿದ ಪಾಕಿಸ್ತಾನದ ಪಾಸ್‌ಪೋರ್ಟ್‌ ಮತ್ತು ಪಾಸ್‌ಪೋರ್ಟ್‌ನಲ್ಲಿರುವ ವಿಳಾಸದ ಬಗ್ಗೆ ಕೇಂದ್ರ ಸರಕಾರ ಪಾಕಿಸ್ತಾನಿ ಅಧಿಕಾರಿಗಳಿಗೆ ಮಾಹಿತಿ ನೀಡಿದೆ ಎನ್ನಲಾಗಿದೆ.
 
ದಾವುದ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದ್ದರಿಂದ ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಅನುಗುಣವಾಗಿ ಪಾಕಿಸ್ತಾನ ಸಹಕರಿಸಬೇಕು ಎಂದು ಭಾರತ ಒತ್ತಡ ಹೇರಿದ್ದಾಗಿ ಗೃಹ ಸಚಿವ ರಾಜನಾಥ್ ಸಿಂಗ್ ಲೋಕಸಭೆಗೆ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ