16 ವರ್ಷದ ಬಾಲಕಿಗೆ ಡ್ರಗ್ಸ್ ನೀಡಿ ಗ್ಯಾಂಗ್‌ರೇಪ್ ಎಸಗಿದ ಐವರು ಕಾಮುಕರು

ಬುಧವಾರ, 25 ಫೆಬ್ರವರಿ 2015 (16:12 IST)
16 ವರ್ಷ ವಯಸ್ಸಿನ ಬಾಲಕಿಯ ಮೇಲೆ ಗ್ಯಾಂಗ್‌ರೇಪ್ ಎಸಗಿದ ಐವರು ಆರೋಪಿಗಳನ್ನು ಅಪರಾಧ ನಿಯಂತ್ರಣ ದಳದ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ.
 
ಪೊಲೀಸ್ ಮೂಲಗಳ ಪ್ರಕಾರ, ಅತ್ಯಾಚಾರಕ್ಕೊಳಗಾದ ಬಾಲಕಿ ಫೆಬ್ರವರಿ 5 ರಂದು ಪೋಷಕರೊಂದಿಗೆ  ಜಗಳವಾಡಿ ಮನೆಯಿಂದ ತೆರಳಿದ್ದಳು. ಪರಿಚಿತನಾಗಿದ್ದ 17 ವರ್ಷ ವಯಸ್ಸಿನ ಬಾಲಕನೊಬ್ಬ ಆಕೆಯನ್ನು ದಾರಿಯಲ್ಲಿ  ಭೇಟಿ ಮಾಡಿ ಪ್ರತ್ಯೇಕವಾಗಿ ವಾಸಿಸಲು ಮನೆ ಕೊಡಿಸುವ ಭರವಸೆ ನೀಡಿ ರಾಯಗಡ್‌ನ ಲಾಡ್ಜ್‌ಗೆ ಕರೆದುಕೊಂಡು ಹೋಗಿದ್ದಾನೆ.  
 
ಆರೋಪಿ ಬಾಲಕ ಲಾಡ್ಜ್‌ನಲ್ಲಿ ಬಾಲಕಿಗೆ ಮತ್ತು ಬರಿಸುವ ಔಷಧಿಯನ್ನು ನೀಡಿ ಅತ್ಯಾಚಾರವೆಸಗಿದ್ದಾನೆ. ನಂತರ ತನ್ನ ಗೆಳೆಯ ಫಹಾದ್ ಧಾಮ್ಸೆ ಎಂಬಾತನಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾನೆ. ಧಾಮ್ಸೆ ಲಾಡ್ಜ್‌ಗೆ ತೆರಳಿ ಆತನೂ ರೇಪ್ ಮಾಡಿದ್ದಾನೆ. ತದನಂತರ ತಮ್ಮ ಇನ್ನಿಬ್ಬರು ಗೆಳೆಯರಾದ ಮೊಹಮ್ಮದ್ ಜಾವೇದ್ ಮೆಮೋನ್ ಮತ್ತು ಅಮ್ಜದ್ ಅಲಿ ಸಂಗ್ರಾಮ್‌ಗೆ ಫೋನ್ ಮಾಡಿ ಕರೆಸಿಕೊಂಡಿದ್ದಾರೆ. ಅವರೂ ಕೂಡಾ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾರೆ.ಆಮೇಲೆ ಬಾಲಕಿಯನ್ನು ಮತ್ತೊಬ್ಬ ಐದನೇ ವ್ಯಕ್ತಿ ಅಕ್ರಂ ಇಕ್ಬಾಲ್ ಖಾನ್‌ನ ವಶಕ್ಕೆ ನೀಡಿದ್ದಾರೆ. ಇಕ್ಬಾಲ್ ಖಾನ್ ಖಾಪೋಲಿಯಲ್ಲಿರುವ ತನ್ನ ನಿವಾಸಕ್ಕೆ ಯುವತಿಯನ್ನು ಕರೆದುಕೊಂಡು ಹೋಗಿ ಮತ್ತು ಬರಿಸುವ ಔಷಧಿ ನೀಡಿ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.   
 
ಏತನ್ಮಧ್ಯೆ, ಫೆಬ್ರವರಿ 9 ರಂದು ಬಾಲಕಿಯ ಕುಟುಂಬದವರು ಪ್ರಶಾಂತ್ ಸಿಂಗ್ ಎಂಬಾತನ ವಿರುದ್ಧ ಮುಂಬ್ರಾ ಪೊಲೀಸ್ ಠಾಣೆಯಲ್ಲಿ ಅಪಹರಣ ಕೇಸ್ ದಾಖಲಿಸಿದ್ದಾರೆ. 
 
ಮುಂಬ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ನಂತರ ಕೇಸ್‌ನ್ನು ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಅಪರಾಧ ವಿಭಾಗದ ಪೊಲೀಸರು ತನಿಖೆಯಲ್ಲಿ ಲೋಪದೋಷಗಳಿರುವುದು ಕಂಡು ಮತ್ತೊಮ್ಮೆ ತೀವ್ರವಾಗಿ ವಿಚಾರಣೆ ನಡೆಸಿದಾಗ ಅತ್ಯಾಚಾರದ ಘಟನೆ ಬಹಿರಂಗವಾಗಿದೆ. 
 
ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ ಆರೋಪಿಗಳ ವಿರುದ್ಧ ಬಾಲಕಿಯ ಅಪಹರಣ, ಅತ್ಯಾಚಾರ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿ ಜೈಲಿಗಟ್ಟಿದ್ದಾರೆ.
 

ವೆಬ್ದುನಿಯಾವನ್ನು ಓದಿ