92 ವರ್ಷದ ವೃದ್ಧೆಯ ಮೇಲೆ 26 ವರ್ಷದ ಯುವಕನಿಂದ ರೇಪ್

ಶುಕ್ರವಾರ, 1 ಆಗಸ್ಟ್ 2014 (10:56 IST)
ಅಪರಾಧಗಳ ರಾಜಧಾನಿ ಉತ್ತರಪ್ರದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ನಿಲ್ಲುವ  ಲಕ್ಷಣಗಳೇ ತೋರುತ್ತಿಲ್ಲ. 3 ತಿಂಗಳ ಹಸುಳೆಯಿಂದ ಹಿಡಿದು, 90 ದಾಟಿದ ಅಜ್ಜಿಯಂದಿರ ಮೇಲೂ ಅತ್ಯಾಚಾರದಂತಹ ಭೀಕರ ಕೃತ್ಯಗಳು ದಾಖಲಾಗುತ್ತಿವೆ. 

ಇದಂತಹದೇ ಒಂದು ಘೋರ ಪೈಶಾಚಿಕ ಕೃತ್ಯವೆಸಗಿದ್ದ ಯುವಕನೊಬ್ಬನಿಗೆ ಕೋರ್ಟ್ ಕಠಿಣ ಶಿಕ್ಷೆ ವಿಧಿಸುವ ನಿರ್ಣಯ ಕೈಗೊಂಡಿದೆ. 92 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧಿತನಾಗಿದ್ದ 26 ವರ್ಷದ ಯುವಕನೊಬ್ಬನೊಬ್ಬನನ್ನು ದೋಷಿ ಎಂದು ನ್ಯಾಯಾಲಯ ಘೋಷಿಸಿದೆ. 
 
ಆರೋಪಿ ಮಂಟು ಎಂಬಾತನಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಶ್ಯಾಮ್ ಕುಮಾರ್ ಭಾರತೀಯ ದಂಡಸಂಹಿತೆ 376ರ ಪ್ರಕಾರ ದೋಷಿ ಎಂದು ಪರಿಗಣಿಸಿದೆ. 
 
ಕೋರ್ಟ್ ಶಿಕ್ಷೆಯನ್ನಿನ್ನು ಘೋಷಿಸಿಲ್ಲ. ಪೋಲಿಸರ ಪ್ರಕಾರ  10 ಅಗಸ್ಟ್ 2011ರಲ್ಲಿ ಶಾಮಲಿ ಜಿಲ್ಲೆಯ ಕಾಂಘಲಾ ಕಸ್ಬೆ ಎಂಬಲ್ಲಿ ಮಹಿಳೆಯ ಮನೆಯಲ್ಲಿಯೇ ಮಂಟು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. 
 
ವೈದ್ಯಕೀಯ ಪರೀಕ್ಷೆಯಲ್ಲಿ ಆಕೆಯ ಮೇಲೆ ಅತ್ಯಾಚಾರವಾಗಿರುವುದು ಸಾಬೀತಾಗಿತ್ತು. ಪ್ರಕರಣದ ವಿಚಾರಣೆ ನಡೆಯುತ್ತಿದ್ದ ಸಮಯದಲ್ಲಿಯೇ ಪೀಡಿತೆ ಅಜ್ಜಿ ಸಾವನ್ನಪ್ಪಿದ್ದಳು. ಆದರೆ ಆಕೆಯ ಹೇಳಿಕೆಯನ್ನು ಕೋರ್ಟ್ ದಾಖಲಿಸಿಕೊಂಡಿತ್ತು. 

ವೆಬ್ದುನಿಯಾವನ್ನು ಓದಿ