''ಇಂಡಿಯಾಸ್ ಡಾಟರ್‌'' ನಲ್ಲಿ ಮಹಿಳೆಯರ ಅವಹೇಳನ: ವಕೀಲರ ವಿರುದ್ಧ ಆಕ್ರೋಶ

ಶುಕ್ರವಾರ, 6 ಮಾರ್ಚ್ 2015 (10:21 IST)
ಇಂಡಿಯಾಸ್ ಡಾಟರ್ ಸಾಕ್ಷ್ಯಚಿತ್ರದಲ್ಲಿ ಮಹಿಳೆಯರ ಬಗ್ಗೆ ಇಬ್ಬರು ವಕೀಲರು ಮಾಡಿರುವ ಅವಹೇಳನಾಕಾರಿ ಪ್ರತಿಕ್ರಿಯೆಗಳಿಗೆ ತೀವ್ರ ಆಕ್ರೋಶ ಕೇಳಿಬಂದಿದೆ.
ಸಹವರ್ತಿ ವಕೀಲರು ಕೂಡ ಇವರಿಬ್ಬರು ವಕೀಲರ ಪರವಾನಗಿಗಳನ್ನು ರದ್ದು ಮಾಡಬೇಕೆಂದು ಬಯಸಿದ್ದು, ಸಾಮಾಜಿಕ ಜಾಲತಾಣದಲ್ಲಿರುವ 
ಅನೇಕ ಪೋಸ್ಟಿಂಗ್‌ಗಳಲ್ಲಿ ಈ ವಕೀಲರನ್ನು ಶಿಕ್ಷಿಸುವಂತೆ ಒತ್ತಾಯಿಸಿವೆ.
 
23 ವರ್ಷ ವಯಸ್ಸಿನ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್ ರೇಪ್ ಮತ್ತು ಹತ್ಯೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದ ನಾಲ್ವರು ಅಪರಾಧಿಗಳ ಪರ ಶರ್ಮಾ ಮತ್ತು ಎಕೆ ಸಿಂಗ್ ವಕೀಲರಾಗಿದ್ದಾರೆ.
 
ಸರ್ಕಾರ ಈಗಾಗಲೇ ಬಿಬಿಸಿಗೆ ಲೀಗಲ್ ನೋಟಿಸ್ ಕಳಿಸಿದ್ದು, ನಿರ್ಭಯಾ ಸಾಕ್ಷ್ಯ ಚಿತ್ರವನ್ನು ತೆಗೆಯುವಂತೆ ಆದೇಶಿಸಿದೆ. ನನ್ನ ಪುತ್ರಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ವಕೀಲರ ಮೇಲೆ ಸರ್ಕಾರಕ್ಕೆ ಯಾಕೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ವಿದ್ಯಾರ್ಥಿನಿಯ ತಾಯಿ ಕೂಡ ಕೇಳಿದ್ದಾರೆ.

ಸಾಕ್ಷ್ಯಚಿತ್ರದಲ್ಲಿ ವಕೀಲ ಶರ್ಮಾ ಒಂದು ಹಂತದಲ್ಲಿ ಭಾರತದ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಸ್ಥಾನವಿಲ್ಲ ಎಂದು ಪ್ರತಿಕ್ರಿಯಿಸಿದ್ದರು. ಎಕೆ ಸಿಂಗ್ ಮತ್ತು ಶರ್ಮಾ ಇಬ್ಬರೂ ಇನ್ನೂ ಕೆಲವು ಅವಹೇಳನಕಾರಿ ಪ್ರತಿಕ್ರಿಯೆಗಳನ್ನು ನೀಡಿದ್ದರು.

ವೆಬ್ದುನಿಯಾವನ್ನು ಓದಿ