ರಾಜ್ಯಪಾಲ ಖುರೇಷಿ ವಜಾಕ್ಕೆ ಯತ್ನಿಸಿಲ್ಲ: ಕೇಂದ್ರಸರ್ಕಾರದ ಸ್ಪಷ್ಟನೆ

ಶನಿವಾರ, 23 ಆಗಸ್ಟ್ 2014 (11:36 IST)
ಉತ್ತರಾಖಂಡದ ರಾಜ್ಯಪಾಲ ಅಜೀಜ್ ಖುರೇಷಿ ಅವರನ್ನು ಅಧಿಕಾರ ತ್ಯಜಿಸುವಂತೆ ಬಲವಂತ ಮಾಡಿಲ್ಲ ಎಂದು ಸರ್ಕಾರ ಇಂದು ಪ್ರತಿಪಾದಿಸಿದೆ. ಖುರೇಷಿ ಅವರಿಗೆ ರಾಜೀನಾಮೆ ನೀಡುವಂತೆ ಕೇಂದ್ರಸರ್ಕಾರದಿಂದ ಎರಡು ದೂರವಾಣಿ ಕರೆಗಳು ಬಂದಿರುವುದರ ಬಗ್ಗೆ ವಿವರಣೆ ನೀಡುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.ಉತ್ತರಾಖಂಡದ ರಾಜ್ಯಪಾಲ ಅಜೀಜ್ ಖುರೇಷಿ ಅವರನ್ನು ವಜಾ ಮಾಡುವ ಯಾವುದೇ ಕ್ರಮವಿಲ್ಲ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಮುಂದಿನ ಕೋರ್ಟ್ ವಿಚಾರಣೆಗೆ ವಿಸ್ತೃತ ಪ್ರತಿಕ್ರಿಯೆಯನ್ನು ಸಿದ್ಧಪಡಿಸುವುದಾಗಿ ಹೇಳಿದರು. ಕಳೆದ ಜುಲೈ ಕೊನೆಯಲ್ಲಿ ಮತ್ತು ಆಗಸ್ಟ್‌ನಲ್ಲಿ ಪುನಃ ಗೃಹ ಕಾರ್ಯದರ್ಶಿ ಅನಿಲ್ ಗೋಸ್ವಾಮಿ ಎರಡು ಬಾರಿ ಖುರೇಷಿಗೆ ಕರೆ ಮಾಡಿ ರಾಜೀನಾಮೆ ನೀಡಿ ಅಥವಾ ವಜಾಗೊಳ್ಳಿ-ಎಂಬ ಎರಡು ಆಯ್ಕೆಗಳನ್ನು ಇರಿಸಿದ್ದರು. 
 
2012ರಲ್ಲಿ ಉತ್ತರಾಖಂಡದಲ್ಲಿ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ ಖುರೇಷಿ, ಕೋರ್ಟ್ ಕೇಸ್‌ನಲ್ಲಿ ವಾದ ಮಂಡಿಸಿ ದೇಶದ ರಾಷ್ಟ್ರಪತಿಗೆ ಮಾತ್ರ ರಾಜ್ಯಪಾಲರನ್ನು ವಜಾ ಮಾಡುವ ಅಧಿಕಾರವಿದೆ ಎಂದು ತಿಳಿಸಿದ್ದರು.
 
ಬಿಜೆಪಿ ಸರ್ಕಾರ ಮೇನಲ್ಲಿ ಅಧಿಕಾರಕ್ಕೆ ಬಂದ ಬಳಿಕ ಹಿಂದಿನ ಸರ್ಕಾರ ನೇಮಕಮಾಡಿದ ಕೆಲವು ರಾಜ್ಯಪಾಲರ ರಾಜೀನಾಮೆಗಳಿಗೆ ಕೋರಿದ್ದರು.ಹೊಸ ಸರ್ಕಾರ ಅಧಿಕಾರ ವಹಿಸಿಕೊಂಡ ಮಾತ್ರಕ್ಕೆ ರಾಜ್ಯಪಾಲರನ್ನು ತೆಗೆಯುವಂತಿಲ್ಲ ಎಂದು 2010ರಲ್ಲಿ ಸುಪ್ರೀಂಕೋರ್ಟ್ ತೀರ್ಪನ್ನು ಕಾಂಗ್ರೆಸ್ ಮತ್ತು ಇತರೆ ವಿರೋಧ ಪಕ್ಷಗಳು ಉದಾಹರಿಸಿವೆ. 

ವೆಬ್ದುನಿಯಾವನ್ನು ಓದಿ