ಕಿಡ್ನ್ಯಾಪರ್ಸ್` ಗಳಿಗೆ ಶೂಟ್ ಮಾಡಿ ಮೈದುನನನ್ನು ರಕ್ಷಿಸಿದ ಮಹಿಳಾ ಶೂಟರ್

ಭಾನುವಾರ, 28 ಮೇ 2017 (17:07 IST)
ನವದೆಹಲಿ:ದೆಹಲಿ ಮೂಲದ ಮಹಿಳಾ ಶೂಟರ್‌ವೊಬ್ಬರು ಅಪಹರಣಕಾರನ್ನು ಶೂಟ್ ಮಾಡಿ ಅವರಿಂದ ತಮ್ಮ ಮೈದುನನನ್ನು ರಕ್ಷಿಸಿ ಶೌರ್ಯ ಮೆರೆದಿದ್ದಾರೆ. ಶೂಟರ್ ಹಾಗೂ ಕೋಚ್ ಆಯಿಶಾ ಫಲಾಕ್ (33) ಎಂಬುವವರೇ ಕಿಡ್ನಾಪರ್ಸ್‌ಗೆ ಗುಂಡಿಕ್ಕಿ ತಮ್ಮ ಮೈದುನ ಆಸೀಫ್‌ನನ್ನು ರಕ್ಷಿಸಿದವರು. 
ಆಯಿಶಾ ಅವರ ಮೈದುನ ಆಸೀಫ್ ದೆಹಲಿ ವಿವಿಯ ವಿದ್ಯಾರ್ಥಿಯಾಗಿದ್ದು, ಜೊತೆಗೆ ಪಾರ್ಟ್‌ಟೈಮ್‌ ಕ್ಯಾಬ್ ಡ್ರೈವ್ ಮಾಡುತ್ತಿದ್ದ. ಆಸೀಫ್ ನ ಕ್ಯಾಬ್ ಹತ್ತಿದ್ದ ಇಬ್ಬರು ದುಷ್ಕರ್ಮಿಗಳು ಆಸೀಫ್‌ ನನ್ನು ಕಿಡ್ನಾಪ್ ಮಾಡಿ ಅತನ ಮನೆಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟು ಬ್ಲಾಕ್‌ಮೇಲ್‌ ಮಾಡಿದ್ದರು. 
 
ಭಜನಪುರ್ ಏರಿಯಾಗೆ 25 ಸಾವಿರ ಹಣ ತೆಗೆದುಕೊಂಡು ಬರುವಂತೆ ಆಸೀಫ್ ಕುಟುಂಬದವರಿಗೆ ಬೇಡಿಕೆ ಇಟ್ಟಿದ್ದರು. ಈ ವಿಷಯವನ್ನು ಶೂಟರ್ ಆಯಿಶಾ ಹಾಗೂ ಅವರ ಪತಿ ಪೊಲೀಸರಿಗೂ ಮುಟ್ಟಿದ್ದರು. ಬಳಿಕ ದುಷ್ಕರ್ಮಿಗಳು ಹೇಳಿದ ಜಾಗಕ್ಕೆ ಆಯಿಶಾ ಹಾಗೂ ಅವರ ಪತಿ ಜೊತೆ ಪೊಲೀಸರು ತೆರಳಿದ್ದರು. ಆಗ ಅಹಪರಣಕಾರರು ಅಲ್ಲಿಂದ ಆಸೀಫ್‌ನನ್ನು ಹೊತ್ತು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆಗ ಆಸೀಫ್‌ನನ್ನ ರಕ್ಷಿಸಲು ಪರವಾನಗಿ ಪಡೆದ ಪಿಸ್ತೂಲ್ ಹೊಂದಿದ್ದ ಶೂಟರ್, ದುಷ್ಕರ್ಮಿಗಳ ಮೇಲೆ ಗುಂಡು ಹಾರಿಸಿದ್ದಾರೆ. ಪರಿಣಾಮವಾಗಿ ಓರ್ವನ ಸೊಂಟದ ಭಾಗಕ್ಕೆ ಹಾಗೂ ಮತ್ತೋರ್ವನ ಕಾಲಿಗೆ ಗುಂಡು ತಗುಲಿದೆ. ಇದರಿಂದ ಸ್ಥಳದಲ್ಲೇ ಕುಸಿದು ಬಿದ್ದ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆಸಿಫ್ ನನ್ನು ಕಿಡ್ನ್ಯಾಪರ್ಸ್ ಗಳಿಂದ ರಕ್ಷಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ