ವಿಶ್ವಪ್ರಸಿದ್ಧ ಸ್ಮಾರಕ ಆಗ್ರಾದ ತಾಜಮಹಲ್ ಮೂಲತಃ ಹಿಂದೂ ದೇವಾಲಯವಾಗಿತ್ತು ಎಂಬ ಅರ್ಜಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಈ ಕುರಿತು ಸ್ಪಷ್ಟನೆ ನೀಡುವಂತೆ ಸ್ಥಳೀಯ ನ್ಯಾಯಾಲಯ ಗೃಹ ಸಚಿವಾಲಯ,ಪುರಾತತ್ವ ಇಲಾಖೆ ಮತ್ತು ಕೇಂದ್ರ ಸಂಸ್ಕೃತಿ ಸಚಿವಾಲಯಕ್ಕೆ ನೋಟಿಸ್ ಜಾರಿ ಮಾಡಿದೆ. ಸ್ಪಷ್ಟನೆ ನೀಡಲು ಮೇ 6 ರವರೆಗೆ ಗಡುವು ನೀಡಲಾಗಿದೆ.
ಮುಂದಿನ ವಿಚಾರಣೆ ಮೇ 13ಕ್ಕೆ ನಡೆಯಲಿದೆ.
ಮೊಘಲ್ ದೊರೆ ಷಹಜಹಾನ್‌ನಿಂದ ನಿರ್ಮಾಣವಾದುದೆಂದು ಹೇಳಲಾಗುತ್ತಿರುವ ತಾಜ್‌ಮಹಲ್ ಹಿಂದೆ ಹಿಂದೂ ದೇವಾಲಯವಾಗಿತ್ತು ಎಂಬ ವಾದಗಳು ಇತ್ತೀಚಿಗೆ ಕೇಳಿ ಬರುತ್ತಿವೆ.