ಘರ್ ವಾಪಸಿ ಬಲವಂತದ ಮತಾಂತರವಲ್ಲ- ಆರ್‌ಎಸ್ಎಸ್

ಗುರುವಾರ, 18 ಡಿಸೆಂಬರ್ 2014 (08:33 IST)
ಆಗ್ರಾದಲ್ಲಿ ನಡೆಸಲಾದ  ಮರುಮತಾಂತರ ವಿಚಾರಕ್ಕೆ ಸಂಸತ್ತಿನಲ್ಲಿ ತೀವೃ ವಿರೋಧ, ಟೀಕೆ ವ್ಯಕ್ತವಾಗುತ್ತಿದ್ದರು ಕೂಡ  ಆರ್‌ಎಸ್ಎಸ್  ಮತ್ತಷ್ಟು ಮನೆಗೆ ಮರಳಿ( ಘರ್ ವಾಪಸಿ) ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲು ನಿರ್ಧರಿಸಿದೆ. 
ಘರ್ ವಾಪಸಿ ಮತ್ತು ಮತಾಂತರದ ನಡುವೆ ವ್ಯತ್ಯಾಸವಿದೆ. ದೇಶದಲ್ಲಿರುವ ಎಲ್ಲ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರು ಹಿಂದು ಧರ್ಮದಿಂದ ಮತಾಂತರಗೊಂಡವರಾದರೂ ಮೂಲ ಧರ್ಮಕ್ಕೆ  ಹಿಂತಿರುಗಲು ಸ್ವಯಂ ಆಸಕ್ತಿಯುಳ್ಳವರನ್ನು ಮಾತ್ರ ಮರಳಿ ಹಿಂದೂ ಧರ್ಮಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂದು ಆರ್‌ಎಸ್ಎಸ್ ಮೂಲಗಳು ತಿಳಿಸಿವೆ. 
 
ಅಲಿಗಢ್ ಮತ್ತು ಸೋನಿಯಾ ಗಾಂಧಿ ಪ್ರತಿನಿಧಿಸುವ ರಾಯ್ ಬರೇಲಿಯಲ್ಲಿ ಕ್ರಿಸ್‌ಮಸ್ ದಿನದಂದು ಘರ್ ವಾಪಸಿ ಕಾರ್ಯಕ್ರಮವನ್ನು ಆಯೋಜಿಸಲು ಆರ್‌ಎಸ್ಎಸ್ ಯೋಜಿಸಿದೆ.

ವೆಬ್ದುನಿಯಾವನ್ನು ಓದಿ