ಭಯೋತ್ಪಾದನೆಯಲ್ಲಿ ಒಳ್ಳೆಯ,ಕೆಟ್ಟ ಭಯೋತ್ಪಾದನೆಯಿರುವುದಿಲ್ಲ: ಮುಖರ್ಜಿ

ಬುಧವಾರ, 3 ಫೆಬ್ರವರಿ 2016 (19:49 IST)
ಭಯೋತ್ಪಾದನೆಗೆ ಬೆಂಬಲ ನೀಡುವ ಮತ್ತು ಪ್ರಾಯೋಜಕತ್ವ ವಹಿಸುವ ರಾಷ್ಟ್ರಗಳ ವಿರುದ್ಧ, ವಿಶ್ವದ ರಾಷ್ಟ್ರಗಳು ಒಂದಾಗಿ ಕಾರ್ಯಾಚರಣೆ ನಡೆಸಬೇಕಾಗಿದೆ ಎಂದು ರಾಷ್ಟ್ರಪತಿ ಪ3ಣಬ್ ಮುಖರ್ಜಿ ಕರೆ ನೀಡಿದ್ದಾರೆ. 
 
ಭಯೋತ್ಪಾದನೆ ನಿಗ್ರಹ ಕುರಿತಂತೆ ಆಯೋಜಿಸಿದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖರ್ಜಿ, ಭಯೋತ್ಪಾದನೆಯಲ್ಲಿ ಒಳ್ಳೆಯ ಭಯೋತ್ಪಾದನೆ, ಕೆಟ್ಟ ಭಯೋತ್ಪಾದನೆ ಎನ್ನುವುದಿಲ್ಲ. ಭಯೋತ್ಪಾದನೆ ಎನ್ನುವುದು ರಾಕ್ಷಸನಿದ್ದಂತೆ. ಅದನ್ನು ನಿರ್ಮೂಲನೆಗೊಳಿಸುವುದು ವಿಶ್ವದ ಏಕೈಕ ಗುರಿಯಾಗಿರಬೇಕು ಎಂದರು.
 
ಅಫ್ಘಾನಿಸ್ತಾನದ ಮುಖಂಡ ಅಬ್ದುಲ್ಲಾ ಅಬ್ದುಲ್ಲಾ ಮಾತನಾಡಿ, ಏಷ್ಯಾ ಖಂಡದಲ್ಲಿರುವ ರಾಷ್ಟ್ರಗಳು ತಮ್ಮ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅನುಗುಣವಾಗಿ ಭಯೋತ್ಪಾದನೆ ಬಗ್ಗುಬಡಿಯಲು ಪರಸ್ಪರ ಸಹಕಾರ ನೀಡುವುದು ಅನಿವಾರ್ಯವಾಗಿದೆ ಎಂದರು. 
 
ಪಾಕಿಸ್ತಾನದ ಹೆಸರನ್ನು ಪ್ರಸ್ತಾಪಿಸದೆ ಕೆಲ ರಾಷ್ಟ್ರಗಳು ಭದ್ರತಾ ಹಿತಾಸಕ್ತಿಗಳು ಉಗ್ರರಿಗೆ ಬೆಂಬಲ ನೀಡುತ್ತಿರುವುದಲ್ಲದೇ ಪ್ರಚೋದನೆ ಕೂಡಾ ನೀಡುತ್ತಿವೆ ಎಂದು ಕಿಡಿಕಾರಿದರು.  
 
ಅಫ್ಘಾನಿಸ್ತಾನ ಶಾಂತಿ ಸ್ಥಾಪನೆಗೆ ಬದ್ಧವಾಗಿದ್ದು,  ಫೆಬ್ರವರಿ 6 ರಂದು ಇಸ್ಲಾಮಾಬಾದ್‌ನಲ್ಲಿ ತಾಲಿಬಾನ್ ಮುಖಂಡರೊಂದಿಗೆ ಶಾಂತಿ ಮಾತುಕತೆ ನಡೆಯಲಿದೆ. ದೇಶದ ನೆರೆ ಹೊರೆಯ ರಾಷ್ಟ್ರಗಳು ಒಳ್ಳೆಯ ಭಯೋತ್ಪಾದನೆ, ಕೆಟ್ಟ ಭಯೋತ್ಪಾದನೆ ಎಂದು ವಿಂಗಡಿಸುವುದು ನಿಲ್ಲಿಸಬೇಕು ಎಂದು ಅಫ್ಗಾನಿಸ್ತಾನ್ ಮುಖಂಡ ಅಬ್ದುಲ್ಲಾ ಅಬ್ದುಲ್ಲಾ ಗುಡುಗಿದರು.

ವೆಬ್ದುನಿಯಾವನ್ನು ಓದಿ