ಈ ದಂಪತಿಗೆ 35 ಸಾವಿರ ಅಡಿ ಎತ್ತರದಲ್ಲಿ ಸಿಕ್ಕಿತು ಗುಡ್ ನ್ಯೂಸ್!
ಸೋಮವಾರ, 19 ಜೂನ್ 2017 (09:35 IST)
ಮುಂಬೈ: ಯಾರಿಗೆಲ್ಲಾ ಎಲ್ಲೆಲ್ಲಿ ಶುಭ ಸುದ್ದಿ ಸಿಗುತ್ತದೆ ನೋಡಿ. ಈ ದಂಪತಿಗೆ 35 ಸಾವಿರ ಅಡಿ ಎತ್ತರದಲ್ಲಿ ಆಕಾಶದಲ್ಲಿ ಹಾರಾಡುವಾಗ ತಮ್ಮ ಜೀವನದಲ್ಲೇ ಮರೆಯಲಾಗದ ಉಡುಗೊರೆಯೊಂದು ಸಿಕ್ಕಿದೆ.
ಸೌದಿ ಅರೇಬಿಯಾದಿಂದ ಕೊಚ್ಚಿಗೆ ತೆರಳುತ್ತಿದ್ದ ಜೆಟ್ ಏರ್ ವೇಸ್ ಸಂಸ್ಥೆಯ ವಿಮಾನದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಮಹಿಳೆಯರೊಬ್ಬರಿಗೆ ವಿಮಾನದಲ್ಲೇ ಹೆರಿಗೆ ನೋವು ಕಾಣಿಸಿಕೊಂಡಿದ್ದು, ವಿಮಾನ ಹಾರಾಡುತ್ತಿರುವಾಗಲೇ ಗಂಡು ಮಗುವಿಗೆ ಜನ್ಮವಿತ್ತಿದ್ದಾರೆ.
ಇದರಿಂದಾಗಿ ಕೊಚ್ಚಿಗೆ ತೆರಳಬೇಕಾಗಿದ್ದ ವಿಮಾನವನ್ನು ಮುಂಬೈ ಕಡೆಗೆ ಚಲಾಯಿಸಲಾಯಿತು. ನಂತರ ತಾಯಿ-ಮಗುವನ್ನು ಮುಂಬೈಯ ಆಸ್ಪತ್ರೆಗೆ ದಾಖಲಿಸಲಾಯಿತು. ವಿಶೇಷವೆಂದರೆ ಇದೀಗ ಜೆಟ್ ಏರ್ ವೇಸ್ ಸಂಸ್ಥೆ ಈ ಮಗುವಿಗೆ ಜೀವನ ಪರ್ಯಂತ ಉಚಿತ ಪ್ರಯಾಣಕ್ಕೆ ಪಾಸ್ ನೀಡುವುದಾಗಿ ಘೋಷಿಸಿದೆ!