14 ಪುತ್ರಿಯರಿದ್ದರೂ ಒಬ್ಬ ಪುತ್ರನನ್ನು ಬಯಸುತ್ತಿರುವ ದಂಪತಿಗಳು

ಶುಕ್ರವಾರ, 3 ಜುಲೈ 2015 (16:58 IST)
ಪುತ್ರನಿಂದ ವಂಶಾಭಿವೃದ್ಧಿಯಾಗುತ್ತದೆ ಎನ್ನುವ ವ್ಯಾಮೋಹ ಇಂದು ನಿನ್ನೆಯದಲ್ಲ. ಶತಶತಮಾನಗಳ ಇತಿಹಾಸವಿದೆ. ಇಂದಿನ ಆಧುನಿಕ ಯುಗದಲ್ಲಿ ಅದೇ ಸಂಪ್ರದಾಯವನ್ನು ಪಾಲಿಸುತ್ತಿದ್ದಾರೆ. 14 ಹೆಣ್ಣುಮಕ್ಕಳನ್ನು ಹೊಂದಿರುವ ದಂಪತಿಗಳು ಒಬ್ಬ ಪುತ್ರನ ಜನ್ಮಕ್ಕಾಗಿ ಬೇಡಿಕೊಳ್ಳುತ್ತಿದ್ದಾರೆ.
 
ಗುಜರಾತ್‌ನ ದಾಹೋಡ್ ಜಿಲ್ಲೆಯ ಝಾರಿಭುಜಿ ಗ್ರಾಮದ ನಿವಾಸಿಯಾದ 35 ವರ್ಷ ವಯಸ್ಸಿನ ರಾಮಸಿನ್ಹ್ ಸಂಗೋಡ್, ನನ್ನ ಪತ್ನಿ ಕನುಗೆ 16ನೇ ಬಾರಿಗೆ ಹೆರಿಗೆಯಾಗುತ್ತಿದೆ.ಒಂದು ವೇಳೆ ಪುತ್ರಿ ಜನಿಸಿದಲ್ಲಿ ಮತ್ತೊಂದು ಬಾರಿ ಪುತ್ರನನ್ನು ಹೆರಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ.   
 
ರಾಮಸಿನ್ಹ್ ಪತ್ನಿ ಕನು ಮಾತನಾಡಿ, ನನ್ನ ಪತಿ ಬೇರೆ ಮದುವೆಯಾಗುತ್ತೇನೆ ಎಂದು ಹೆದರಿಸುತ್ತಿರುವುದರಿಂದ ನನ್ನ ದೇಹ ದುರ್ಬಲವಾಗುತ್ತಿದ್ದರೂ ಹೆರಿಗೆಗೆ ಸಿದ್ಧಳಾಗುತ್ತಿದ್ದೇನೆ ಎಂದು ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾಳೆ.
 
ತನ್ನ ಹಳೆಯ ರಾಗವನ್ನೇ ಹಾಡುತ್ತಿರುವ ರಾಮಸಿನ್ಹಾ, ಸಹೋದರಿಯರ ಜೀವನದಲ್ಲಿ ಸಹೋದರನ ಪಾತ್ರ ತುಂಬಾ ಪ್ರಮುಖವಾಗಿರುತ್ತದೆ. ಕುಟುಂಬದ ಗೌರವ ಕಾಪಾಡಲು ಪುತ್ರನಿಂದ ಮಾತ್ರ ಸಾಧ್ಯ. ಆದ್ದರಿಂದ ಪುತ್ರ ಜನಿಸುವುದನ್ನು ಕಾಯುತ್ತಿದ್ದೇನೆ ಎಂದು ಹೇಳಿದ್ದಾನೆ.
 
ದಾಹೋಡ್ ಜಿಲ್ಲೆಯಲ್ಲಿ 2011ರಲ್ಲಿ ನಡೆದ ಜನಗಣತಿಯ ಪ್ರಕಾರ, 1000 ಬಾಲಕರಿಗೆ 948 ಬಾಲಕಿಯರಿದ್ದಾರೆ ಎನ್ನಲಾಗಿದೆ,.
 

ವೆಬ್ದುನಿಯಾವನ್ನು ಓದಿ