14 ವರ್ಷಗಳಲ್ಲಿ ಒಂದು ದಿನವೂ ಶಾಲೆಗೆ ರಜೆ ಹಾಕದ ವಿದ್ಯಾರ್ಥಿನಿ

ಶನಿವಾರ, 5 ಮಾರ್ಚ್ 2016 (15:58 IST)
ಔಕ್ಸಿಲಮ್ ಕಾನ್ವೆಂಟ್  ಪಿಯುಸಿ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯೊಬ್ಬಳು ಕಳೆದ 14 ವರ್ಷಗಳಿಂದ ಒಂದು ದಿನವೂ ಶಾಲೆಗೆ ರಜೆ ಹಾಕದೇ ಶೇ.100ಕ್ಕೆ 100ರಷ್ಟು ಹಾಜರಾತಿ ಪಡೆದು ಅಚ್ಚರಿ ಮೂಡಿಸಿದ್ದಾಳೆ. ಪುತ್ರಿಯ ಶಿಸ್ತಿನ ಬಗ್ಗೆ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.
 
ಚಂದ್ರಜಾ ಗುಹಾ ಎನ್ನುವ ವಿದ್ಯಾರ್ಥಿನಿ, ನರ್ಸರಿ ಶಿಕ್ಷಣದಿಂದ ಪಿಯುಸಿ ತರಗತಿಯವರೆಗೆ ಒಂದೇ ಒಂದು ದಿನವೂ ಶಾಲೆಗೆ ರಜೆ ಹಾಕದೆ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ.
 
ವಿದ್ಯಾರ್ಥಿನಿ ಚಂದ್ರಜಾ ಉದಾಹರಣೆಯಾಗಿದ್ದು, ಇತರ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸ್ಪೂರ್ತಿ ತುಂಬಲಿದ್ದಾಳೆ ಎಂದು ಕಿಶೋರ್ ಭಾರತಿ ಶಾಲೆಯ ಪ್ರಾಂಶಪಾಲೆ ನಿತ್ಯಾ ರಂಜನ್ ಬಾಗ್ಚಿ ಹೇಳಿದ್ದಾರೆ.
 
ಮಾಧ್ಯಮಗಳಿಂದ ಚಂದ್ರಜಾ ಸುದ್ದಿ ತಿಳಿದ ಪಶ್ಚಿಮ ಬಂಗಾಳದ ಶಿಕ್ಷಣ ಖಾತೆ ಸಚಿವ ಪಾರ್ಥಾ ಚಟರ್ಜಿ, ಆಕೆಗೆ ವಿಧಾನಸೌಧಕ್ಕೆ ಬರುವಂತೆ ಆಹ್ವಾನ ನೀಡಿ, ಪ್ರಮಾಣ ಪತ್ರ ಮತ್ತು ಉಡುಗೊರೆಗಳನ್ನು ನೀಡಿ, ಭವಿಷ್ಯದಲ್ಲಿ ವಿದ್ಯಾರ್ಥಿನಿಗೆ ಸರಕಾರ ನೆರವು ನೀಡಲಿದೆ ಎಂದು ತಿಳಿಸಿದ್ದಾರೆ.
 
ಚಂದ್ರಜಾಳ ಪೋಷಕರಾದ ತಾಯಿ ಡಾಲಿ ಗುಹಾ ಮತ್ತು ಕ್ಷಿತಿ ರಂಜನ್ ಗುಹಾ, ಇಂತಹ ಸಾಧನೆಗೆ ಪುತ್ರಿಯೇ ಕಾರಣವಾಗಿದ್ದಾಳೆ. ಓದಿನಲ್ಲೂ ತುಂಬಾ ಚುರುಕಾಗಿದ್ದಾಳೆ ಎಂದು ಹೇಳಿದ್ದಾರೆ.
 
ವಿದ್ಯಾರ್ಥಿನಿ ಚಂದ್ರಜಾ ನರ್ಸರಿ ಶಿಕ್ಷಣದಿಂದಲೂ ಎ ಗ್ರೇಡ್ ವಿದ್ಯಾರ್ಥಿನಿಯಾಗಿದ್ದು, ಯಾವತ್ತೂ ಶೇ.90 ಕ್ಕಿಂತ ಕಡಿಮೆ ಅಂಕಗಳಿಸಿಲ್ಲ ಎಂದು ಪೋಷಕರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ