ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಈ ಶಾಸಕನ ಭರ್ಜರಿ ಕೊಡುಗೆ

ಸೋಮವಾರ, 15 ಮೇ 2017 (13:21 IST)
ಲಕ್ನೋ: ಬಿಜೆಪಿ ಮತ್ತು ಹಿಂದೂ ಸಂಘಟನೆಗಳನ್ನು ಬಿಟ್ಟರೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ ಯಾರೂ ಆಗ್ರಹಿಸುತ್ತಿಲ್ಲ ಎಂಬುದಕ್ಕೆ ಅಪವಾದವೆಂಬಂತೆ ಸಮಾಜವಾದಿ ಪಕ್ಷದ ಶಾಸಕರೊಬ್ಬರಿದ್ದಾರೆ.

 
ಬುಕ್ಕಾಲ್ ನವಾಬ್ ಎಂಬ ಶಾಸಕ ಒಂದು ವೇಳೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವುದಿದ್ದರೆ, 15 ಕೋಟಿ ರೂ. ದೇಣಿಗೆ ನೀಡುವುದಾಗಿ ಹೇಳಿಕೊಂಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತನಗೆ ಜಮೀನು ಪರಿಹಾರ ಹಣ ಸಿಕ್ಕಿದ ಕೂಡಲೇ ಅದರಲ್ಲಿ 15 ಕೋಟಿ ರಾಮ ಮಂದಿರ ನಿರ್ಮಾಣಕ್ಕೆ ನೀಡುವುದಾಗಿ ಘೋಷಿಸಿಕೊಂಡಿದ್ದಾರೆ.

ಅವರಿಗೆ ಸರ್ಕಾರದಿಂದ 30 ಕೋಟಿ ರೂ. ಪರಿಹಾರ ಧನ ಸಿಗಬೇಕಿದೆ. ‘ರಾಮ ಹುಟ್ಟಿದ ಸ್ಥಳದಲ್ಲಿಯೇ ರಾಮ ಮಂದಿರ ನಿರ್ಮಾಣವಾಗಬೇಕು’ ಎಂದು ನವಾಬ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ