ದೇಶದ ಅತಿ ಶ್ರೀಮಂತ ಗ್ರಾಮ ಯಾವುದು ಗೊತ್ತೆ?

ಗುರುವಾರ, 18 ಡಿಸೆಂಬರ್ 2014 (14:29 IST)
ಗುಜರಾತಿನಲ್ಲಿರುವ ಈ ಪುಟ್ಟ ಹಳ್ಳಿಯೊಂದು ಏಕಾಯೇಕಿ ದೇಶದ ಗಮನ ಸೆಳೆದಿದೆ. ದೇಶದಲ್ಲಿಯೇ ಅತ್ಯಂತ ಶ್ರೀಮಂತ ಗ್ರಾಮ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಈ ಶ್ರೀಮಂತಿಗೆ ಕಾರಣವೇನೆಂದರೆ ಗ್ರಾಮದ ಎಲ್ಲ ಪರಿವಾರದ ಕನಿಷ್ಠ ಒಬ್ಬ ಸದಸ್ಯರು ವಿದೇಶದಲ್ಲಿರುವುದು. ಗ್ರಾಮದ ಪ್ರತಿಯೊಂದು ಮನೆಯಲ್ಲೂ ಲಕ್ಷುರಿ ಕಾರುಗಳಿವೆಯಿಲ್ಲಿ.
ಗುಜರಾತ್ ರಾಜ್ಯದ ಖೇಡಾ ಜಿಲ್ಲೆಯಲ್ಲಿರುವ ಧರ್ಮಜ್‌ನಲ್ಲಿ  3 ಸಾವಿರ ಕುಟುಂಬಗಳು ಬದುಕು ನಡೆಸುತ್ತಿವೆ. ಪ್ರತಿಯೊಂದು ಮನೆಯಲ್ಲಿ ಕನಿಷ್ಠ ಒಬ್ಬರು ಇಂಗ್ಲೆಂಡ್, ಅಮೇರಿಕಾ, ಕೆನಡಾ ಸೇರಿದಂತೆ ವಿದೇಶಗಳಲ್ಲಿ ವಾಸಿಸುತ್ತಿದ್ದಾರೆ. ಈ ಪುಟ್ಟ ಊರಿನ ಬ್ಯಾಂಕುಗಳಲ್ಲಿ ಸಾವಿರ ಕೋಟಿಗೂ ಹೆಚ್ಚಿನ ಹಣ ಜಮಾ ಆಗಿದೆಯಂತೆ. ಇಲ್ಲಿನ ಜನಸಂಖ್ಯೆ 11,333. ರಾಷ್ಟ್ರೀಕೃತ ಬ್ಯಾಕ್‌ಗಳು ಸೇರಿದಂತೆ  13 ಬ್ಯಾಂಕ್‌ಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿವೆ. 
 
ಬ್ಯಾಂಕ್ ಆಫ್ ಬರೋಡಾ ಮತ್ತು ದೇನಾ ಬ್ಯಾಂಕ್‌ಗಳಲ್ಲಿರುವ ಠೇವಣಿ ಮೊತ್ತವೇ 220 ಕೋಟಿಗಳಷ್ಟಿದೆ. ದೇಶದ ಮಟ್ಟಿಗೆ ಇದೊಂದು ದಾಖಲೆ. 
 
ರಾಜ್ಯದ ಮಟ್ಟಿಗೆ ಹೇಳುವುದಾದರೆ ಕೇರಳದಲ್ಲಿ  ಎನ್.ಆರ್.ಐಗಳು ಇಟ್ಟಿರುವ ಒಟ್ಟು ಠೇವಣಿ ಮೊತ್ತ 90 ಸಾವಿರ ಕೋಟಿ ರೂಪಾಯಿ. 

ವೆಬ್ದುನಿಯಾವನ್ನು ಓದಿ