ಉಗ್ರ ಅಫ್ಜಲ್‌ಗುರುನನ್ನು ಬೆಂಬಲಿಸುವವರನ್ನು ನೇಣಿಗೆ ಹಾಕಬೇಕು: ತೊಗಾಡಿಯಾ

ಭಾನುವಾರ, 28 ಫೆಬ್ರವರಿ 2016 (11:57 IST)
ಕಳೆದ 2001ರಲ್ಲಿ ಸಂಸತ್ ಮೇಲೆ ದಾಳಿ ಮಾಡಿದ ರೂವಾರಿ ಅಫ್ಜಲ್‌ಗುರುನನ್ನು ಬೆಂಬಲಿಸುವವರನ್ನು ಗಲ್ಲಿಗೇರಿಸಬೇಕು. ದೇಶದ್ರೋಹಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ನಾಯಕ ಪ್ರವೀಣ್ ತೊಗಾಡಿಯಾ ಗುಡುಗಿದ್ದಾರೆ. 
 
ಅಫ್ಜಲ್ ಗುರು ಒಬ್ಬ ದೇಶದ್ರೋಹಿ. ಅವನನ್ನು ಬೆಂಬಲಿಸುವವರನ್ನು ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿದ ಅವರು, ಕೇಂದ್ರ ಸರಕಾರ ಗೋಹತ್ಯೆ ಮಾಡುವವರಿಗೆ ಮರಣದಂಡನೆ ಮತ್ತು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಸಂಸತ್ತಿನಲ್ಲಿ ಮಸೂದೆಗೆ ಅಂಗೀಕಾರ ಪಡೆಯಬೇಕು ಎಂದು ಮನವಿ ಮಾಡಿದರು.
 
ಕಾಶ್ಮಿರದಲ್ಲಿ ದೇಶದ್ರೋಹಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿರುವ ಹಿನ್ನೆಲೆಯಲ್ಲಿ, ಇದೀಗ ದೇಶಾದ್ಯಂತ ವ್ಯಾಪಿಸುತ್ತಿದೆ. ಒಂದು ವೇಳೆ, ಕಠಿಣ ಕ್ರಮ ತೆಗೆದುಕೊಂಡಿದ್ದಲ್ಲಿ ಇಂತಹ ಸ್ಥಿತಿ ಎದುರಾಗುತ್ತಿರಲಿಲ್ಲ. ದೇಶದ್ರೋಹಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸುವಂತಹ ಕಾನೂನು ಜಾರಿಯಾಗಬೇಕು ಎಂದು ಆಗ್ರಹಿಸಿದರು.
 
ಸುಪ್ರೀಂಕೋರ್ಟ್‌ನಲ್ಲಿ ಅಯೋಧ್ಯೆ ರಾಮಮಂದಿರ ನಿರ್ಮಾಣ ವಿವಾದದ ಪ್ರಕರಣ ನಡೆಯುತ್ತಿದ್ದರೂ, ಕೇಂದ್ರ ಸರಕಾರ ಸಂಸತ್ತಿನಲ್ಲಿ ರಾಮಮಂದಿರ ನಿರ್ಮಾಣ ಕುರಿತಂತೆ ಕಾನೂನು ಪಾಸ್ ಮಾಡಲಿ ಎಂದರು.
 
ಗೋಹತ್ಯೆ ಮಾಡುವಂತಹ ವ್ಯಕ್ತಿಗಳ ಬಗ್ಗೆ ಮುಸ್ಲಿಂ ಸಮುದಾಯಕ್ಕೆ ಮಾಹಿತಿಯಿದ್ದಲ್ಲಿ ಅವರ ಹೆಸರುಗಳನ್ನು ಸರಕಾರಕ್ಕೆ ನೀಡಿದಲ್ಲಿ ಮುಗ್ದ, ಅಮಾಯಕ ವ್ಯಕ್ತಿಗಳಿಗೆ ಕಿರುಕುಳವಾಗುವುದು ತಪ್ಪಿಸಿದಂತಾಗುತ್ತದೆ ಎಂದು ವಿಎಚ್‌ಪಿ ನಾಯಕ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ