ಗೋಮಾಂಸ ಸೇವಿಸುವವರು ಸೇವಿಸಲಿ ಬಿಡಿ: ನೀತಿ ಆಯೋಗದ ಮುಖ್ಯಸ್ಥ

ಬುಧವಾರ, 3 ಫೆಬ್ರವರಿ 2016 (20:03 IST)
ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಜನತೆ ಯಾವುದನ್ನು ಸೇವಿಸಲು ಇಷ್ಟಪಡುತ್ತಾರೆಯೋ ಅವರಿಗೆ ಸೇವಿಸಲು ಅವಕಾಶ ನೀಡಬೇಕು ಎಂದು ದೇಶದ ಅತ್ಯುನ್ನತ ಅಧಿಕಾರಿಯಾದ ನೀತಿ ಆಯೋಗದ ಕಾರ್ಯನಿರ್ವಾಹಕ ಅಧಿಕಾರಿ ಅಮಿತಾಬ್ ಕಾಂತ್ ಹೇಳಿದ್ದಾರೆ. 
ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒಂದು ವೇಳೆ ಜನತೆ ಗೋಮಾಂಸ ಸೇವಿಸಲು ಬಯಸಿದಲ್ಲಿ ಅವರಿಗೆ ಸೇವಿಸಲು ಅವಕಾಶ ನೀಡಿ ಎಂದರು. 
 
ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿದ್ದೇವೆ ಎಂದು ಭಾವಿಸುತ್ತೇನೆ. ದೇಶದ ಜನತೆಗೆ ಮುಕ್ತ ಅಭಿವ್ಯಕ್ತ ಸ್ವಾತಂತ್ರ್ಯವಿರಬೇಕು. ಅವರಿಗೆ ಇಷ್ಟವಾಗಿರುವುದನ್ನು ಬಹಿರಂಗವಾಗಿ ಹೇಳಲು ಅವಕಾಶ ನೀಡಿ. ಅದರಂತೆ ಜನತೆ ಏನು ತಿನ್ನಬೇಕು ಎನ್ನುವುದನ್ನು ಅವರೇ ನಿರ್ಧರಿಸಬೇಕೇ ಹೊರತು ನಾವಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
 
ಆಯ್ಕೆಯಲ್ಲಿ ಸ್ವಾತಂತ್ರ್ಯವಿರಬೇಕು ಪ್ರವಾದಿ ಮೊಹಮ್ಮದ್ ಕೂಡಾ ಗೋಹತ್ಯೆಯ ವಿರೋಧಿಯಾಗಿದ್ದರು. ಅವರು ಯಾವತ್ತೂ ಗೋಮಾಂಸ ಸೇವಿಸಲಿಲ್ಲ. ಏನು ತಿನ್ನಬೇಕು ಏನು ತಿನ್ನಬಾರದು ಎನ್ನುವುದು ಅವರವರಿಗೆ ಬಿಟ್ಟ ವಿಷಯವಾಗಿದೆ ಎಂದು ತಿಳಿಸಿದರು. 
 
ಹಿಂದುಗಳು ಬಹುಸಂಖ್ಯಾತವಾಗಿರುವ ಭಾರತ ದೇಶದಲ್ಲಿ ಗೋವಿಗೆ ಪವಿತ್ರ ಸ್ಥಾನವಿರುವುದರಿಂದ ಗೋಮಾಂಸ ನಿಷೇಧಿಸಬೇಕು ಎನ್ನುವ ಚರ್ಚೆ, ವಿವಾದ ಆರಂಭವಾಗಿರುವ ಸಂದರ್ಭದಲ್ಲಿಯೇ ನೀತಿ ಆಯೋಗದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಅಮಿತಾಬ್ ಕಾಂತ್ ಹೇಳಿಕೆ ಹೊರಬಿದ್ದಿದೆ. 

ವೆಬ್ದುನಿಯಾವನ್ನು ಓದಿ