9 ವರ್ಷದ ಶಾಲಾ ಬಾಲಕಿಯ ಮೇಲೆ ಮೂವರು ಶಿಕ್ಷಕರಿಂದ ಗ್ಯಾಂಗ್‌ರೇಪ್

ಮಂಗಳವಾರ, 24 ನವೆಂಬರ್ 2015 (15:52 IST)
ಆಘಾತಕಾರಿ ಘಟನೆಯೊಂದರಲ್ಲಿ ಒಂಬತ್ತು ವರ್ಷದ ಬಾಲಕಿಯ ಮೇಲೆ ಕಳೆದ 2014ರಿಂದ ನಿರಂತರವಾಗಿ ಮೂವರು ಶಿಕ್ಷಕರು ಗ್ಯಾಂಗ್‌ರೇಪ್ ಎಸಗಿದ ಹೇಯ ಘಟನೆ ವರದಿಯಾಗಿದೆ.
 
ಬಾಲಕಿಯ ಪೋಷಕರು ನೀಡಿದ ದೂರಿನ ಹಿನ್ನೆಲೆಯಲ್ಲಿ, ಆರೋಪಿ ಶಿಕ್ಷಕರಾದ ಸಂಜಯ್ ಪಾಟೀಲ್(47), ನಿಲೇಶ್ ಭೋಯಿರ್(47) ಮತ್ತು ಜಿತೇಂದ್ರ ಜಾಧವ್‌ರನ್ನು (23) ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಸಬ್‌ ಇನ್ಸೆಪೆಕ್ಟರ್ ಎಸ್.ಬಿ.ಕದಂ ತಿಳಿಸಿದ್ದಾರೆ. 
 
ಅತ್ಯಾಚಾರಕ್ಕೊಳಗಾದ ಬಾಲಕಿಯ ಪ್ರಕಾರ, ಮೂವರು ಶಿಕ್ಷಕರು ಖಾಲಿಯಾಗಿದ್ದ ಕ್ಲಾಸ್ ರೂಮ್‌ಗಳಲ್ಲಿ ಹಲವಾರು ಬಾರಿ ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ. ಘಟನೆಯ ಬಗ್ಗೆ ಯಾರಿಗೂ ಮಾಹಿತಿ ನೀಡದಂತೆ ಬೆದರಿಕೆಯೊಡ್ಡಿದ್ದರು ಎಂದು ತಿಳಿಸಿದ್ದಾಳೆ. 
 
ಮೂವರು ಶಿಕ್ಷಕರ ಲೈಂಗಿಕ ಕಿರುಕುಳ ತಾಳದೆ ಬಾಲಕಿ, ಕಳೆದ ತಿಂಗಳು ಶಾಲೆಯಲ್ಲಿ ನಡೆಯುತ್ತಿರುವ ಅತ್ಯಾಚಾರದ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ್ದಾಳೆ. ತದನಂತರ ಪೋಷಕರು ಪೊಲೀಸರಿಗೆ ದೂರು ನೀಡಿದ್ದರಿಂದ ಆರೋಪಿ ಶಿಕ್ಷಕರನ್ನು ಬಂಧಿಸಿ ಅವರ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ