ಒಡಿಶಾ ಮಾಜಿ ಮುಖ್ಯಮಂತ್ರಿ ಜೆ.ಬಿ. ಪಟ್ನಾಯಕ್ ನಿಧನ

ಮಂಗಳವಾರ, 21 ಏಪ್ರಿಲ್ 2015 (10:35 IST)
ಮೂರು ಬಾರಿ ಒಡಿಶಾ ಮುಖ್ಯಮಂತ್ರಿಯಾಗಿದ್ದ ಅಸ್ಸಾಂ ಮಾಜಿ ರಾಜ್ಯಪಾಲ ಜೆ.ಬಿ. ಪಟ್ನಾಯಕ್ ಆಂಧ್ರಪ್ರದೇಶದ ತಿರುಪತಿಯಲ್ಲಿ ಮಂಗಳವಾರ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. 89 ವರ್ಷ ವಯಸ್ಸಿನ ಪಾಟ್ನಾಯಕ್ ಖಾಸಗಿ ಆಸ್ಪತ್ರೆಯೊಂದರಲ್ಲಿ ರಾತ್ರಿ 3 ಗಂಟೆಗೆ ಮೃತಪಟ್ಟರು. 
 
ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಭಾಗವಹಿಸಲು ಪಟ್ನಾಯಕ್ ತಿರುಪತಿಗೆ ಮುಖ್ಯಅತಿಥಿಯಾಗಿ ಆಗಮಿಸಿದ್ದರು.  ಪಾಟ್ನಾಯಕ್ ವಿವಿಯ ಕುಲಪತಿಯಾಗಿದ್ದಾರೆ.  ತೀವ್ರ ಎದೆನೋವು ಕಾಣಿಸಿಕೊಂಡ ಪಾಟ್ನಾಯಕ್ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಅಲ್ಲಿ ಮೃತಪಟ್ಟಿದ್ದಾರೆ. 
 
ಮೃತರ ಪಾರ್ಥಿವ ಶರೀರವನ್ನು ವಿಶೇಷ ಫ್ಲೈಟ್‌ನಲ್ಲಿ ಭುವನೇಶ್ವರಕ್ಕೆ ತಂದು ಪುರಿಯ ಸ್ವರ್ಗದ್ವಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಅಸ್ಸಾಂ ರಾಜ್ಯಪಾಲರಾಗಿ ಕರ್ತವ್ಯ ನಿರ್ವಹಿಸಿದ್ದ ಪಟ್ನಾಯಕ್  ಕಳೆದ ಡಿಸೆಂಬರ್‌ನಲ್ಲಿ ಒರಿಸ್ಸಾಗೆ ಹಿಂದಿರುಗಿದ್ದರು.
 
1980ರಿಂದ 1989 ಮತ್ತು 1995ರಿಂದ 1999ರವರೆಗೆ ಎರಡು ಅವಧಿಗೆ ಅವರು ಒರಿಸ್ಸಾ ಮುಖ್ಯಮಂತ್ರಿಯಾಗಿದ್ದರು. ಅವರು ಖ್ಯಾತ ಸಾಹಿತಿ ಮತ್ತು ಪತ್ರಕರ್ತರಾಗಿದ್ದು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಪಟ್ನಾಯಕ್ ಗೌರವದ ಸಂಕೇತವಾಗಿ ಒಡಿಶಾ ಸರ್ಕಾರ ಮಂಗಳವಾರ ಸರ್ಕಾರಿ ರಜೆ ಮತ್ತು ಏಳುದಿನಗಳ ಸರ್ಕಾರಿ ರಜೆ ಘೋಷಿಸಿದೆ. 

ವೆಬ್ದುನಿಯಾವನ್ನು ಓದಿ