1993ರ ಮುಂಬೈ ಸ್ಫೋಟ ರೂವಾರಿ ಟೈಗರ್ ಮೆಮೋನ್‌ಗೆ ಕಾಲ್‌ಗರ್ಲ್‌ ಪ್ರೇಮಪಾಶ..!

ಶನಿವಾರ, 1 ಆಗಸ್ಟ್ 2015 (15:10 IST)
1993ರಲ್ಲಿ ಮುಂಬೈ ಸ್ಫೋಟದ ರೂವಾರಿಯಾದ ಟೈಗರ್ ಮೆಮೋನ್ ಕಾಲ್‌ಗರ್ಲ್‌ಗಾಗಿ ತನ್ನ ಪತ್ನಿಗೆ ವಿಚ್ಚೇದನ ನೀಡಲು ಬಯಸಿದ್ದ ಎಂದು ಮೂಲಗಳು ತಿಳಿಸಿವೆ. 
 
ಮಾಧ್ಯಮಗಳ ಪ್ರಕಾರ, 1993ರ ಮುಂಬೈ ಸ್ಫೋಟಕ್ಕಿಂತ ಮುಂಚೆ ಟೈಗರ್ ಮೆಮೋನ್, ಹಲವಾರು ವೇಶ್ಯಾವಾಟಿಕೆ ಅಡ್ಡೆಗಳಿಗೆ ಭೇಟಿ ನೀಡುತ್ತಿದ್ದ. ಕಾಲ್‌ಗರ್ಲ್‌ ಒಬ್ಬಳ ಮೇಲೆ ಲವ್ ಅಗಿತ್ತು ಎನ್ನಲಾಗಿದೆ. ಅವಳ ಪ್ರೇಮಪಾಶದಲ್ಲಿ ಯಾವ ಮಟ್ಟಿಗಹೆ ಲೀನವಾಗಿದ್ದನೆಂದರೆ ತನ್ನ ಸ್ಮಗ್ಲಿಂಗ್ ವಹಿವಾಟು ತೊರೆದಿದ್ದಲ್ಲದೇ ಪತ್ನಿಗೆ ಕೂಡಾ ಡೈವೋರ್ಸ್ ನೀಡಲು ಬಯಸಿದ್ದ ಎನ್ನಲಾಗಿದೆ.  
 
ಪ್ರೇಮ ಕಥೆಗೆ ಕೆಲವೇ ದಿನಗಳಲ್ಲಿ ಮತ್ತೊಂದು ಟ್ವಿಸ್ಟ್ ದೊರೆತಿದೆ. ಕಿಶನ್ ಎಂಬಾತ ಕೂಡಾ ಅದೇ ಕಾಲ್‌ಗರ್ಲ್ ಪ್ರೇಮಪಾಶದಲ್ಲಿ ಸಿಲುಕಿದ್ದ. ಕೊನೆಗೆ ಕಾಲ್‌ಗರ್ಲ್ ಟೈಗರ್ ಮೆಮೋನ್‌ನೊಂದಿಗೆ ಲವ್ವಿ ಡವ್ವಿ ನಡೆಸಿದ್ದಾಳೆ ಎನ್ನುವುದು ಬಹಿರಂಗವಾದ ನಂತರ ಕಿಶನ್ ತನ್ನನ್ನು ತಾನು ಜೀವಂತವಾಗಿ ದಹಿಸಲು ಪ್ರಯತ್ನಿಸಿದ್ದ. ಕಿಶನ್ ಪ್ರೇಮದ ಗಂಭೀರತೆಯನ್ನು ಅರಿತ ಕಾಲ್‌ಗರ್ಲ್ ಮೆಮೋನ್‌ನೊಂದಿಗೆ ದೂರವಾಗಲು ಆರಂಭಿಸಿದಳು.
 
1993ರಲ್ಲಿ ಮುಂಬೈನಲ್ಲಿ ಸರಣಿ ಬಾಂಬ್ ಸ್ಫೋಟ ನಡೆದಾಗ ಟೈಗರ್ ಮೆಮೋನ್ ಮುಂಬೈನಿಂದ ದುಬೈಗೆ ಹಾರಿದ. 
 
ಮುಂಬೈ ಸ್ಫೋಟದ ನಂತರ 1993 ಮಾರ್ಚ್ 12 ರಂದು ವರ್ಲಿ ಬಳಿ ಸ್ಫೋಟಕ ತುಂಬಿದ ಕಾರು ಪತ್ತೆಯಾಗಿತ್ತು. ಕಾರು ಕಾಲ್‌ಗರ್ಲ್ ಹೆಸರಲ್ಲಿ ನೋಂದಣಿಯಾಗಿತ್ತು. ತದನಂತರ ಆಕೆಯನ್ನು ಬಂಧಿಸಲಾಯಿತು. ಕಾಲ್‌ಗರ್ಲ್ ಪೊಲೀಸರಿಗೆ ಮಹತ್ವವಾದ ಮಾಹಿತಿ ತಿಳಿಸಿದ್ದರಿಂದ ಟೈಗರ್ ಮೆಮೋನ್ ಅಕೌಂಟೆಂಟ್‌ ಅಸ್ಗರ್ ಮುಕಾದಮ್‌ನನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.  
 
ಪ್ಲಾಜಾ ಸಿನೆಮಾ ಟಾಕೀಸ್‌ನಲ್ಲಿ ಬಾಂಬ್‌ ಇಟ್ಟು 10 ಮಂದಿ ಸಾವಿಗೆ ಕಾರಣರಾದ ಆರೋಪದ ಮೇಲೆ ಮುಕಾದಮ್ ಮತ್ತು ಶಾನವಾಜ್ ಖುರೇಷಿಯನ್ನು ಅಪರಾಧಿ ಎಂದು ಘೋಷಿಸಲಾಯಿತು. 
 

ವೆಬ್ದುನಿಯಾವನ್ನು ಓದಿ