ಬಾಯಿ ಮುಚ್ಚಿಸಲು ದೇಶದ್ರೋಹಿ, ಹಿಂದೂ ವಿರೋಧಿ ಪಟ್ಟ ಕಟ್ಟುತ್ತಾರೆ: ರಾಹುಲ್ ಗಾಂಧಿ

ಶುಕ್ರವಾರ, 31 ಜುಲೈ 2015 (17:15 IST)
ಪುಣೆಯಲ್ಲಿ ಪ್ರತಿಭಟನಾ ನಿರತರಾಗಿರುವ ಭಾರತೀಯ ಚಲನಚಿತ್ರ ಮತ್ತು ಅಥವಾ ಎಫ್‌ಟಿಐಐ ಕಿರುತೆರೆ ಸಂಸ್ಥೆ ವಿದ್ಯಾರ್ಥಿಗಳ ಜತೆ ಸಮಾಲೋಚನೆ ನಡೆಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿ ಮತ್ತು ಬಿಜೆಪಿಯ ವಿರುದ್ಧ ಬಿರುಸಿನ ವಾಗ್ದಾಳಿ ನಡೆಸಿದ್ದಾರೆ. 
ಕಿರುತೆರೆ ನಟ ಗಜೇಂದ್ರ ಚೌಹಾಣ್‌ ಅವರನ್ನು ಎಫ್‌ಟಿಟಿಐ ಚೇರ್ಮನ್‌ ಆಗಿ ನೇಮಕ ಮಾಡಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ಕಳೆದ ಎರಡು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಅವರಿಗೆ ಬೆಂಬಲ ನೀಡಿರುವ ಗಾಂಧಿ, "ನೀವು ನಮಗೆ ಪೂರಕವಾಗಿ ನಡೆದರೆ ಒಳ್ಳೆಯದು, ಇಲ್ಲ ನಿಮ್ಮನ್ನು ಹೊಸಕಿ ಹಾಕುತ್ತೇವೆ. ಎಂಬುದು ಕೇಂದ್ರ ಸರ್ಕಾರದ ನೀತಿ. ಜನರ ಬಾಯಿ ಮುಚ್ಚಿಸಲು ಅವರು ರಾಷ್ಟ್ರ ದ್ರೋಹಿ, ಹಿಂದೂ ವಿರೋಧಿ ಎಂಬ ಹಣೆಪಟ್ಟಿಗಳನ್ನು ಕಟ್ಟುತ್ತಾರೆ",  ಎಂದು ಎಚ್ಚರಿಸಿದ್ದಾರೆ. 
 
ದೂರದರ್ಶನದಲ್ಲಿ ಸಹ ಪ್ರಸಾರವಾದ ಮುಕ್ತ ಸಭೆಯಲ್ಲಿ ಮಾತನಾಡುತ್ತಿದ್ದ ಕಾಂಗ್ರೆಸ್ ಉಪಾಧ್ಯಕ್ಷ ಎಫ್‌ಟಿಟಿಐ ಪ್ರತಿಭಟನೆ  "ನಿಜವಾದ ಹೋರಾಟದ ಒಂದು ಭಾಗ. ಭಾರತದ ನಿಜವಾದ ಕಲ್ಪನೆ ಏನು ಎಂಬುದರ ಸಂಕೇತವಿದು",  ಎಂದು ಹೇಳಿದ್ದಾರೆ. 
 
"ಕೇವಲ ಮೋದಿ ಬಿಜೆಪಿಯ ಎಲ್ಲ ಕಾರ್ಯಚಟುವಟಿಕೆಗಳನ್ನು ನಿರ್ಧರಿಸುತ್ತಾರೆ. ಬಿಜೆಪಿಯಲ್ಲಿ ಅಧಿಕಾರ ಒಬ್ಬ ವ್ಯಕ್ತಿಯಲ್ಲಿ ಕೇಂದ್ರೀಕೃತವಾಗಿದೆ.  ಪಿಎಂಗೆ ಹತ್ತಿರವಾದವರನ್ನು ಬಿಜೆಪಿ ಕಿತ್ತೆಸೆಯಲಾರದು", ಎಂದು ರಾಹುಲ್ ಆರೋಪಿಸಿದ್ದಾರೆ. 
 
ರಾಹುಲ್‌ ಜೀನ್ಸ್- ಟೀ ಶರ್ಟ್‌ನಲ್ಲಿ  ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ವಿದ್ಯಾರ್ಥಿಗಳ ಜತೆ ಪ್ರಶ್ನೋತ್ತರದಲ್ಲಿ ಅವರು ತೊಡಗಿಸಿಕೊಂಡಿದ್ದರು. 

ವೆಬ್ದುನಿಯಾವನ್ನು ಓದಿ