ನವದೆಹಲಿಯಲ್ಲಿಂದು ಎಐಸಿಸಿ ಸಭೆ

ಶುಕ್ರವಾರ, 17 ಏಪ್ರಿಲ್ 2015 (09:31 IST)
ದೀರ್ಘ ರಜೆಯ ಮೇಲೆ ತೆರಳಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸ್ವದೇಶಕ್ಕೆ ವಾಪಸ್ಸಾಗಿದ್ದು ಇಂದು ಅವರ ನಿವಾಸದಲ್ಲಿ ಎಐಸಿಸಿ ಸಭೆ ನಡೆಯಲಿದೆ. 

ಈ ಮಹತ್ವಪೂರ್ಣ ಸಭೆಯಲ್ಲಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ಭೂ ಸ್ವಾಧೀನ ಮಸೂದೆ ತಿದ್ದುಪಡಿ ಮಸೂದೆ ವಿರೋಧದ ಧರಣಿಯ ಕುರಿತಾದ ಸಿದ್ಧತೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿದು ಬಂದಿದೆ. ಅಲ್ಲದೇ ತಾವು ಪಕ್ಷದ ಹೊಣೆಗಾರಿಕೆ ವಹಿಸಿಕೊಳ್ಳುವುದರ ಕುರಿತಂತೆ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸುತ್ತಿರುವ, ಬಂಡಾಯವೆದ್ದಿರುವ ಪಕ್ಷದ ಹಿರಿಯ ನಾಯಕರ ಜತೆ ರಾಹುಲ್ ಚರ್ಚೆ ನಡೆಸಲಿದ್ದಾರೆ. 
 
ಪಕ್ಷವನ್ನು ಮುನ್ನಡೆಯಲು ರಾಹುಲ್ ಗಾಂಧಿಯವರಿಗೆ ಅನುಭವ ಸಾಲದು. ಆದ್ದರಿಂದ ಸೋನಿಯಾರವರೇ ಈ ಸ್ಥಾನದಲ್ಲಿ ಮುಂದುವರೆಯಲಿ ಎಂದು ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದಿಕ್ಷೀತ್, ಕ್ಯಾಪ್ಟನ್ ಅಮರಿಂದರ್ ಸಿಂಗ್ ಸೇರಿದಂತೆ ಮುಂತಾದವರು ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ. ಆದ್ದರಿಂದ ರಾಹುಲ್ ಇವರೆಲ್ಲರ ಜತೆ ಮಾತುಕತೆ ನಡೆಸಿದ್ದಾರೆ. 
 
ಕೇಂದ್ರ ಸರ್ಕಾರ ಭೂ ಸ್ವಾಧೀನ ಮಸೂದೆಗೆ ತಿದ್ದುಪಡಿ ಮಾಡುವುದನ್ನು ವಿರೋಧಿಸಿ ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು  ಬರುವ ಭಾನುವಾರ ಬೃಹತ್ ಮೆರವಣಿಗೆಯನ್ನು ಆಯೋಜಿಸಿವೆ. 

ವೆಬ್ದುನಿಯಾವನ್ನು ಓದಿ