ಇಂದು ಕಲಾಂ ಅಂತ್ಯ ಸಂಸ್ಕಾರ

ಗುರುವಾರ, 30 ಜುಲೈ 2015 (10:41 IST)
ಬದುಕಿನ ಪಯಣ ಮುಗಿಸಿದ ಭಾರತದ ಅಮೂಲ್ಯ ರತ್ನ ಅಬ್ದುಲ್ ಕಲಾಂ ಅವರ ಅಂತ್ಯಕ್ರಿಯೆ ಇಂದು ಅವರ ತವರು ರಾಮೇಶ್ವರಂನಲ್ಲಿ ನಡೆಯುತ್ತಿದೆ.

ಈ ನಿಮಿತ್ತ ಅವರ ಕುಟುಂಬಸ್ಥರು ಬೆಳಿಗ್ಗಿನಿಂದಲೇ ಪ್ರಾರ್ಥನೆಯಲ್ಲಿ ತೊಡಗಿದ್ದರು. ನಂತರ ಅವರ ಶರೀರವನ್ನು ಮನೆ ಬಳಿ ಇರುವ ಮಸೀದಿಗೆ ಕೊಂಡೊಯ್ದು ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಮೌಲ್ವಿಗಳು, ಕುಟುಂಬಸ್ಥರು, ಸಂಬಂಧಿಕರು, ಸ್ಥಳೀಯ ನಾಯಕರು ಮಸೀದಿಯಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿದರು. ದೇಹವನ್ನು ಮತ್ತೆ ಮನೆಗೆ ಕೊಂಡೊಯ್ದು ಈಗ ಅಂತಿಮ ಯಾತ್ರೆಯನ್ನು ಪ್ರಾರಂಭಿಸಲಾಗಿದೆ.
 
ತೆರೆದ ವಿಶೇಷ ಸೇನಾ ವಾಹನದಲ್ಲಿ ಪಾರ್ಥಿವ ಶರೀರವನ್ನು ಕೊಂಡೊಯ್ದು ಪೈಕರಂಬು ಪ್ರದೇಶದ ಪೆರಿಯಗುಂಡು ಮೈದಾನದಲ್ಲಿ 12. 30 ರ ಸುಮಾರಿಗೆ ಅವರ ಅಂತ್ಯಸಂಸ್ಕಾರವನ್ನು ನಡೆಸಲಾಗುತ್ತದೆ. 
 
ತಮಿಳುನಾಡಿನ ಹಣಕಾಸು ಸಚಿವರಾದ ಪನ್ನೀರ್ ಸೆಲ್ವಂ ಅಂತ್ಯಕ್ರಿಯೆಗೆ ಸಂಬಂಧಿಸಿದ ಎಲ್ಲಾ ಸಿದ್ಧತೆಗಳನ್ನು ಪರಿಶೀಲಿಸುತ್ತಿದ್ದಾರೆ.
 
ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಸೇರಿದಂತೆ ಕೇಂದ್ರದ ಅನೇಕ ಸಚಿವರು, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇರಳದ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಸೇರಿದಂತೆ ಹಲವು ಗಣ್ಯರು ಅಂತ್ಯ ಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 

ವೆಬ್ದುನಿಯಾವನ್ನು ಓದಿ