ಬಂದಿರುವ 16 ಅಂಚೆ ಮತಗಳು ಸಹ ಜಯಾ ಪರ ಇವೆ.
ಈಗಾಗಲೇ ಎರಡು ಸುತ್ತಿನ ಮತಎಣಿಕೆ ಸಂಪೂರ್ಣಗೊಂಡಿದ್ದು, ಜಯಾ 18,000 ಮತಗಳ ಮುನ್ನಡೆ ಸಾಧಿಸಿದ್ದಾರೆ. ರಾಮಸ್ವಾಮಿ ಕೇವಲ 400 ಮತಗಳನ್ನು ಪಡೆದಿದ್ದಾರೆ. ಒಟ್ಟು 17 ಸುತ್ತಿನ ಮತಎಣಿಕೆ ನಡೆಯಲಿದೆ.
ಕ್ಷೇತ್ರದಲ್ಲಿ ಒಟ್ಟು 230 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.
28 ಅಭ್ಯರ್ಥಿಗಳು ಕಣಕ್ಕಿಳಿದಿದ್ದು ಬಿಜೆಪಿ, ಕಾಂಗ್ರೆಸ್, ಎಂಡಿಎಂಕೆ. ಡಿಎಂಡಿಕೆ ಸೇರಿದಂತೆ ಪ್ರಮುಖ ಪಕ್ಷಗಳು ಮತದಾನವನ್ನು ಬಹಿಷ್ಕರಿಸಿವೆ. ಸಿಪಿಐ ಅಭ್ಯರ್ಥಿಯಾಗಿ ಸಿ. ಮಹೇಂದ್ರನ್ ಕಣಕ್ಕಿಳಿದಿದ್ದರೆ, ಸಾಮಾಜಿಕ ಹೋರಾಟಗಾರ ಟ್ರಾಫಿಕ್ ರಾಮಸ್ವಾಮಿ ಸಹ ಜಯಾಗೆ ಸವಾಲೆಸೆದಿದ್ದಾರೆ.