ಜಮ್ಮು ಕಾಶ್ಮೀರಾ ಚುನಾವಣಾ ಫಲಿತಾಂಶ ಇಂದು: ಒಮರ್ ಗೆ ಹಿನ್ನಡೆ..!

ಮಂಗಳವಾರ, 23 ಡಿಸೆಂಬರ್ 2014 (09:41 IST)
ಜಮ್ಮು ಮತ್ತು ಕಾಶ್ಮೀರದ 87 ವಿಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶ ಇಂದು ಹೊರ ಬೀಳಲಿದ್ದು, ಎಣಿಕೆ ಕಾರ್ಯ ಬರದಿಂದ ಸಾಗಿದೆ. 
 
ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಒಮರ್ ಅಬ್ದುಲ್ಲಾ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ಬಿರ್‌ವಾದಲ್ಲಿ ಮುನ್ನಡೆ ಕಂಡಿದ್ದರೆ ಮತ್ತೊಂದು ಕ್ಷೇತ್ರ ಸೊನವರ್‌ನಲ್ಲಿ  ಹಿನ್ನಡೆ ಸಾಧಿಸುತ್ತಿದ್ದಾರೆ. 
 
ಕಾರ್ಗಿಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಸ್ಗರ್ ಅಲಿ ಮುನ್ನಡೆ ಸಾಧಿಸುತ್ತಿದ್ದು, ಇತರೆ ಪ್ರತಿಸ್ಪರ್ಧಿಗಳನ್ನು ಹಿಮ್ಮೆಟ್ಟಿಸುತ್ತಿದ್ದಾರೆ. ಅಂತೆಯೇ 
ಚುನಾವಣಾ ಫಲಿತಾಂಶದಲ್ಲಿ ಪಿಡಿಪಿ ಮೊದಲನೇ ಸ್ಥಾನದಲ್ಲಿದ್ದು, ಬಿಜೆಪಿ ಎರಡನೇ ಸ್ಥಾನದಲ್ಲಿದೆ. ಇನ್ನು ಎನ್‌ಸಿ ಮೂರನೇ ಸ್ಥಾನಕ್ಕೆ ತೃಪ್ತಿಪಡುವಂತಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ಜಮ್ಮು ಕಾಶ್ಮೀರದಲ್ಲಿ ಅತಂತ್ರ ವಿಧಾನ ಸಭಾ ಫಲಿತಾಂಶ ಹೊರಬೀಳಿವುದು ಖಚಿತವಾಗಿದೆ. 
 
ಇನ್ನು ಅನಂತ್ ನಾಗ್ ಕ್ಷೇತ್ರದಲ್ಲಿ ಪಿಡಿಪಿಯ ಸಿಎಂ ಅಭ್ಯರ್ಥಿ ಮುಫ್ತಿ ಮೊಹಮ್ಮದ್ ಸಯೀದ್ ಮುನ್ನಡೆ ಸಾಧಿಸುತ್ತಿದ್ದು, ಗೆಲುವು ಬಹುತೇಕ ಖಚಿತವಾಗುತ್ತಿದೆ ಎನ್ನಲಾಗಿದೆ. ಹಂದ್ವಾರ ಕ್ಷೇತ್ರದಲ್ಲಿ ಪಿಡಿಪಿಯ ಸಜ್ಜಾದ್ ಲೋನ್ ಮುನ್ನಡೆ ಸಾಧಿಸುತ್ತಿದ್ದಾರೆ. ಪಿಡಿಪಿ ರಾಜ್ಯದಲ್ಲಿ ಅತಿ ಮುನ್ನಡೆ ಸಾಧಿಸುತ್ತಿದ್ದು, ಬಿಜೆಪಿಯ ಸರ್ಕಾರ ರಚನೆಯ ಕನಸಿಗೆ ತಣ್ಣೀರೆರಚಿದೆ. 
 
ಇನ್ನು ಪಕ್ಷಾವಾರು ಪ್ರವೃತ್ತಿಯಲ್ಲಿ ನೋಡುವುದಾದರೆ, ಪಿಡಿಪಿ-35, ಬಿಜೆಪಿ-27, ಎನ್ ಸಿ-12, ಕಾಂಗ್ರೆಸ್-7 ಇತರೆ 2 ಕ್ಷೇತ್ರಗಳಲ್ಲಿ ಮುನ್ನಡೆಸಾಧಿಸುತ್ತಿವೆ. ಜಮ್ಮು ಕಾಶ್ಮೀರದ ಪ್ರತ್ಯೇಕವಾದಿಗಳೂ ಕೂಡ ಸ್ಪರ್ಧೆಯಲ್ಲಿ ಮುನ್ನಡೆ ಸಾಧಿಸುತ್ತಿದ್ದಾರೆ ಎನ್ನಲಾಗಿದೆ. 

ವೆಬ್ದುನಿಯಾವನ್ನು ಓದಿ