ಜಾರ್ಖಂಡ್ ಚುನಾವಣಾ ಫಲಿತಾಂಶ ಇಂದು:ಬಿಜೆಪಿಗೆ ಬಹುಮತ ಖಚಿತ

ಮಂಗಳವಾರ, 23 ಡಿಸೆಂಬರ್ 2014 (10:03 IST)
ರಾಜ್ಯದ 81 ವಿಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶ ಇಂದು ಹೊರ ಬೀಳಲಿದ್ದು, ಎಣಿಕೆ ಕಾರ್ಯ ಬರದಿಂದ ಸಾಗಿದೆ. 
 
80 ಕ್ಷೇತ್ರಗಳ ಪೈಕಿ 40ಕ್ಕೂ ಹೆಚ್ಚು ಮುನ್ನಡೆ ಬಿಜೆಪಿ ಮುನ್ನಡೆ ಸಾಧಿಸುತ್ತಿದ್ದು, ಸ್ಪಷ್ಟ ಬಹುಮತ ಪಡೆಯುವುದು ಬಹುತೇಕ ಖಚಿತವಾಗಿದೆ. ಬಹುಮತಕ್ಕೆ 42 ಕ್ಷೇತ್ರಗಳಲ್ಲಿ ಗೆಲುವು ಅಗತ್ಯವಾಗಿದ್ದು, ಬಿಜೆಪಿಯ ಮುಖ್ಯಮಂತ್ರಿ  ಅಭ್ಯರ್ಥಿ ಅರ್ಜುನ್ ಮುಂಡೆ ಖರಸ್ವಾನ್ ಹಾಗೂ ಧನ್ವಾರ್ ಎಂಬ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ಮುನ್ನಡೆ ಕಾಯ್ದುಕೊಂಡಿದ್ದಾರೆ.  
 
ಇನ್ನು ರಾಜ್ಯದ ಮಾಜಿ ಮುಖ್ಯಮಂತ್ರಿ ಶಿಬು ಸೊರೆನ್ ಅವರ ಪುತ್ರ ಹೇಮಂತ್ ಸೊರೆನ್ ಕೂಡ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ದುಮ್ಕಾ ವಿಧಾನಸಭಾ ಕ್ಷೇತ್ರದಲ್ಲಿ ಹಿನ್ನಡೆ ಕಂಡು ಬಂದಿದೆ. ಬರ್ಹಾತ್ ಕೇಷೇತ್ರದಲ್ಲಿ ಮುನ್ನಡೆ ಸಾಧಿಸುತ್ತಿದ್ದಾರೆ. 
 
ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಸುಖ್ ದಿಯೋ ಧಗತ್ ತಮ್ಮ ಲೋಗರ್ಗದಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುತ್ತಿದ್ದಾರೆ. ಅಂತೆಯೇ ಜೈ ಭಾರತ್ ಸಮಾನತಾ ಅಭ್ಯರ್ಥಿಯಾಗಿರುವ ಮಾಜಿ ಸಿಎಂ ಮಧುಕೋಡಾ ಮದಂಗಾವ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು, ಹಿನ್ನಡೆ ಕಂಡು ಬರುತ್ತಿದೆ. ಜೆವಿಎಂನ ಬಾಬು ಲಾಲ್ ಮರಾಂಡಿ ಕೂಡ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು ಎರಡೂ ಕ್ಷೇತ್ರಗಳಲ್ಲಿಯೂ ಮುನ್ನಡೆ ಸಾಧಿಸುತ್ತಿದ್ದಾರೆ.
 

ವೆಬ್ದುನಿಯಾವನ್ನು ಓದಿ