ರೈತರೊಂದಿಗೆ ಮಾತುಕತೆ ನಡೆಸಿದ ಟಾಲಿವುಡ್ ಸ್ಟಾರ್ ಪವನ್

ಗುರುವಾರ, 5 ಮಾರ್ಚ್ 2015 (14:04 IST)
ಆಂಧ್ರ ಪ್ರದೇಶದ ನೂತನ ರಾಜಧಾನಿ ರಚನೆಗೆ ಸರ್ಕಾರ ಮುಂದಾಗಿದ್ದು, ಅಗತ್ಯ ಭೂಮಿಯ ಸ್ವಾದೀನಕ್ಕೆ ರೈತರು ಸಮ್ಮತಿಸುತ್ತಿಲ್ಲ ಎಂಬ ವಿಷಯ ಹಿನ್ನೆಲೆಯಲ್ಲಿ ನಟ, ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಅವರು ಜಿಲ್ಲೆಯ ಉಂದವಲ್ಲಿ ಗ್ರಾಮಕ್ಕೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದರು. 
 
ಇನ್ನು ಚರ್ಚೆ ವೇಳೆ, ಭೂಮಿಯು ಫಲವತ್ತಾಗಿದ್ದು, ಇಲ್ಲಿನ ಭೂಮಿ ಬೆಳೆ ಬೆಳೆಯಲು ಯೋಗ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ನಮ್ಮ ಭೂಮಿಯನ್ನು ಒಪ್ಪಿಸಲು ಸಾಧ್ಯವಿಲ್ಲ ಎಂದು ರೈತರು ಪವನ್ ಗಮನಕ್ಕೆ ತಂದರು. 
 
ಬಳಿಕ ಪ್ರತಿಕ್ರಿಯಿಸಿದ ಪವನ್, ಈ ಬಗ್ಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗೆ ಸೂಕ್ತವಾಗಿ ಚರ್ಚಿಸಿ ಮುಂದಿನ ನಿರ್ಧಾರವನ್ನು ತಿಳಿಸುತ್ತೇವೆ ಎಂದು ತಿಳಿಸಿದರು. 
 
ಇನ್ನು ಪವನ್ ಭೇಟಿ ಹಿನ್ನೆಲೆಯಲ್ಲಿ ತಮ್ಮ ನೆಚ್ಚಿನ ನಟನ ದರ್ಶನ ಪಡೆಯಲು ಸಹಸ್ರಾರು ಸಂಖೆಯಲ್ಲಿ ಅವರ ಅಭಿಮಾನಿಗಳು ಜಮಾಯಿಸಿದ್ದ ಕಾರಣ ಕಾರ್ಯಕ್ರಮಕ್ಕೆಂದು ಸಿದ್ಧಪಡಿಸಲಾಗಿದ್ದ ಕುರ್ಚಿಗಳೆಲ್ಲವೂ ಕೂಡ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಭೇಟಿಯ ಬಲಿಕ ಅಲ್ಲಿಯೇ ಅಕ್ಕಪಕ್ಕದಲ್ಲಿರುವ ಇತರೆ ಗ್ರಾಮಗಳಿಗೂ ಭೇಟಿ ನೀಡಿದರು. 

ವೆಬ್ದುನಿಯಾವನ್ನು ಓದಿ