ಇಂದ್ರಾಣಿ ಮುಖರ್ಜಿ ಮೂತ್ರದಲ್ಲಿ ಕೋಕೇನ್ ಅಂಶ ಪತ್ತೆ: ಐಜಿಪಿ

ಶನಿವಾರ, 10 ಅಕ್ಟೋಬರ್ 2015 (20:30 IST)
ದೇಶಾದ್ಯಂತ ಕುತೂಹಲ ಕೆರಳಿಸಿದ ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾದ ಇಂದ್ರಾಣಿ ಮುಖರ್ಜಿ ಮೂತ್ರದಲ್ಲಿ ಕೋಕೇನ್ ಪತ್ತೆಯಾಗಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
 
ಹೆಚ್ಚು ಔಷಧಿ ಸೇವನೆ ಅಥವಾ ವಿಷ ಸೇವನೆಯಿಂದಾಗಲಿ ಮುಖರ್ಜಿಯ ಆರೋಗ್ಯ ಹದಗೆಟ್ಟಿಲ್ಲ. ಬದಲಾಗಿ ಕೋಕೇನ್ ಸೇವಿಸಿದ್ದರಿಂದ ಆರೋಗ್ಯದಲ್ಲಿ ಏರು ಪೇರಾಗಿದೆಯೇ ಹೊರತು ಆತ್ಮಹತ್ಯೆ ಪ್ರಯತ್ನ ಮಾಡಿಲ್ಲ ಎಂದು ಐಜಿಪಿ ಬಿಪಿನ್ ಕುಮಾರ್ ಸಿಂಗ್ ತಿಳಿಸಿದ್ದಾರೆ. 
 
ಇಂದ್ರಾಣಿ ಮುಖರ್ಜಿ ಔಷಧಿ ಸೇವನೆಯನ್ನು ನಿಲ್ಲಿಸಿದ್ದರಿಂದ ಶಕ್ತಹೀನರಂತೆ ಕಂಡುಬಂದಿದ್ದರು. ಆದರೆ, ಅವರ ಮೂತ್ರದಲ್ಲಿ ಅಲ್ಪ ಪ್ರಮಾಣದ ಕೋಕೇನ್ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
 
ಇಂದ್ರಾಣಿ ವಿರುದ್ಧ ಯಾವುದೇ ಸಂಚು ನಡೆದಿಲ್ಲ. ಅವರಿಂದ ಆತ್ಮಹತ್ಯೆಯ ಪ್ರಯತ್ನ ಮಾಡಿದ್ದಾರೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಿಲ್ಲ ಎಂದು ಬೈಕುಲ್ಲಾ ಜೈಲಿನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸಿಂಗ್ ತಿಳಿಸಿದ್ದಾರೆ.
 
ಇಂದ್ರಾಣಿ ಕೀಳರಿಮೆ ನಿರೋಧಕ ಔಷಧಿಯನ್ನು ಸೇವಿಸುತ್ತಿದ್ದರಿಂದ ಅವರ ಮೂತ್ರದಲ್ಲಿ ಅಲ್ಪ ಪ್ರಮಾಣದ ಕೋಕೇನ್ ಕಂಡುಬಂದಿರುವುದಕ್ಕೆ ಕಾರಣವಾಗಿರಬಹುದು ಎಂದು ಐಜಿಪಿ ಬಿಪಿನ್ ಕುಮಾರ್ ಸಿಂಗ್ ವಿವರಣೆ ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ