ಸಂಜಯ್ ಚತುರ್ವೇದಿಯನ್ನು ನಮ್ಮ ಕಚೇರಿಗೆ ವರ್ಗಾಯಿಸಿ:ಕೇಜ್ರಿವಾಲ್ ಪತ್ರ

ಬುಧವಾರ, 18 ಫೆಬ್ರವರಿ 2015 (10:20 IST)
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿ ಗದ್ದುಗೆಯಲ್ಲಿನ ಎರಡನೇ ದಿನ ಪರಿಸರ ಸಚಿವ ಪ್ರಕಾಶ್ ಜಾವೇಡ್ಕರ್  ಅವರಿಗೆ ಪತ್ರ ಬರೆದು ಸಂಜಯ್ ಚತುರ್ವೇದಿಯನ್ನು ತಮ್ಮ ಕಚೇರಿಗೆ ವರ್ಗಾಯಿಸುವಂತೆ ಪತ್ರಬರೆಯುವ ಮೂಲಕ ಕೇಂದ್ರ ಸರ್ಕಾರದ ಜೊತೆ ಸಂಘರ್ಷಕ್ಕೆ ಇಳಿದಿದ್ದಾರೆ.

ಚತುರ್ವೇದಿಯನ್ನು ದೆಹಲಿ ಸರ್ಕಾರದ ಭ್ರಷ್ಟಾಚಾರ ದಳದ ಮುಖ್ಯಸ್ಥರನ್ನಾಗಿ ನೇಮಿಸಲು ಕೇಜ್ರಿವಾಲ್  ಬಯಸಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ. . 2004ರ ಆಗಸ್ಟ್‌ನಲ್ಲಿ ಚತುರ್ವೇದಿಯನ್ನು ಏಮ್ಸ್‌ನಲ್ಲಿನ ಭ್ರಷ್ಟಾಚಾರ ನಿಗ್ರಹಕ್ಕೆ ನೇಮಿಸಿದ ಮುಖ್ಯ ಅಧಿಕಾರಿ ಹುದ್ದೆಯಿಂದ ವಿವಾದಾತ್ಮಕವಾಗಿ ವಜಾ ಮಾಡಲಾಗಿತ್ತು.  ಆಸ್ಪತ್ರೆಯಲ್ಲಿ ಅನೇಕ ಹಗರಣಗಳನ್ನು ಚತುರ್ವೇದಿ ಬಯಲು ಮಾಡಿದ್ದರು.

ತೆರಿಗೆದಾರರ ಹಣದಲ್ಲಿ ಅಧಿಕಾರಿಗಳು ಸುದೀರ್ಘ ಪ್ರವಾಸಕ್ಕೆ ತೆರಳಿದ ಬಗ್ಗೆ ತನಿಖೆಗೆ ಅವರು ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಮುಖ್ಯ ಜಾಗೃತಾಧಿಕಾರಿ ಹುದ್ದೆಯಿಂದ ವಜಾ ಮಾಡಲಾಗಿತ್ತು. ಚತುರ್ವೇದಿ ದೆಹಲಿ ಸರ್ಕಾರಕ್ಕೆ ದೊಡ್ಡ ಆಸ್ತಿಯಾಗಲಿದ್ದಾರೆ. ಅವರನ್ನು ನಾವು ತೆರೆದ ಹಸ್ತದಿಂದ ಆಹ್ವಾನಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದರು. 

ವೆಬ್ದುನಿಯಾವನ್ನು ಓದಿ