ನವದೆಹಲಿಯಲ್ಲಿ ಲಘು ಭೂಕಂಪ; ಗಾಬರಿಗೊಂಡ ನಾಗರಿಕರು

ಗುರುವಾರ, 17 ನವೆಂಬರ್ 2016 (11:10 IST)
ರಾಷ್ಟ್ರ ರಾಜಧಾನಿ ನವದೆಹಲಿ ಮತ್ತು ಹರಿಯಾಣ ಗಡಿಯಲ್ಲಿ ಇಂದು ಮುಂಜಾನೆ ಲಘು ಭೂಕಂಪ ಸಂಭವಿಸಿದ್ದು ಮುಂಜಾನೆಯ ಸಿಹಿ ನಿದ್ದೆಯಲ್ಲಿದ್ದ  ಜನರು ಗಾಬರಿಗೊಂಡು ಹೊರಗೋಡಿ ಬಂದಿದ್ದಾರೆ. ದೆಹಲಿ, ಘಾಜಿಯಾಬಾದ್, ಗುರಗಾಂವ್ ಸೇರಿದಂತೆ ಹಲವೆಡೆ  ಭೂಮಿ ಕಂಪಿಸಿದ ಅನುಭವವಾಗಿದೆ.
 
ರಿಕ್ಟರ್ ಮಾಪಕ 4.2 ತೀವ್ರತೆಯ 4.30ರ ಸುಮಾರಿಗೆ ಭೂಮಿ ಕಂಪಿಸಿದೆ ಎಂದು ಭೂವೈಜ್ಞಾನಿಕ ಸಮೀಕ್ಷೆ ವರದಿ ತಿಳಿಸಿದೆ. ಭೂಮಿಯ 20ಕೀಲೋಮೀಟರ್ ಆಳದಲ್ಲಿ ಕಂಪನವಾಗಿದೆ. ಭೂಕಂಪನದ ಕೇಂದ್ರ ನವದೆಹಲಿಯಿಂದ ಸುಮಾರು 100ಕೀಲೋಮೀಟರ್ ದೂರದಲ್ಲಿರುವ ಹರಿಯಾಣದ ಬಾವಲ್ ಎಂದು ತಿಳಿದು ಬಂದಿದೆ. 
 
ಸದ್ಯದ ಮಾಹಿತಿ ಪ್ರಕಾರ ಜೀವಹಾನಿ-ಆಸ್ತಿಪಾಸ್ತಿಯಾಗಿಲ್ಲ. ಹೆಚ್ಚಿನ ಜನರು ನಿದ್ದೆಯಲ್ಲಿದ್ದುದರಿಂದ ಭೂಕಂಪನದ ಅನುಭವವಾಗಿಲ್ಲ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ