ಕೇಂದ್ರೀಯ ವಿವಿಗಳಲ್ಲಿ ತ್ರಿವರ್ಣ ಧ್ವಜ, ಅಪಾಯಕಾರಿ ಟ್ರೆಂಡ್: ಆರ್‌ಜೆಡಿ

ಶುಕ್ರವಾರ, 19 ಫೆಬ್ರವರಿ 2016 (17:02 IST)
ಕೇಂದ್ರಿಯ ವಿಶ್ವವಿದ್ಯಾಲಯಗಳಲ್ಲಿ ರಾಷ್ಟ್ರಧ್ವಜ ಹಾರಾಟ ಕಡ್ಡಾಯಗೊಳಿಸುತ್ತಿರುವ ನಡೆಯನ್ನು ಟೀಕಿಸಿರುವ ಲಾಲು ಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಎಲ್ಲವನ್ನು ಪ್ರದರ್ಶನಕ್ಕೆ ಇಡುವ ಮಟ್ಟಕ್ಕೆ ಇಳಿಯುತ್ತಿದೆ. ಇದು ಅತ್ಯಂತ ಅಪಾಯಕಾರಿ ಪ್ರವೃತ್ತಿ ಎಂದು ಆರೋಪಿಸಿದೆ. 
 
ನಾವು ನಮ್ಮ ತ್ರಿವರ್ಣ ಧ್ವಜವನ್ನು ಹೃದಯದಲ್ಲಿಟ್ಟುಕೊಂಡಿದ್ದೇವೆ.  ರಾಷ್ಟ್ರವಾದವನ್ನು ಕೇವಲ ಧ್ವಜದ ಮೂಲಕವಷ್ಟೇ ಅಲ್ಲದೆ ಚರ್ಚೆ, ಪಾಲ್ಗೊಳ್ಳುವಿಕೆ ಮೂಲಕ ಸಹ ತಿಳಿದುಕೊಳ್ಳುತ್ತೇವೆ. ಆದರೆ ಕೇಂದ್ರ ಸರ್ಕಾರ ಎಲ್ಲವನ್ನು ಪ್ರದರ್ಶಕ್ಕೆ ಇಡುವ ಮಟ್ಟಕ್ಕೆ ಇಳಿಯುತ್ತಿದೆ. ಇದೊಂದು ಅಪಾಯಕಾರಿ ಟ್ರೆಂಡ್ ಆಗುತ್ತಿದೆ ಎಂದು ಆರ್‌ಜೆಡಿ ವಕ್ತಾರ ಮನೋಜ್ ಝಾ ಆತಂಕ ವ್ಯಕ್ತ ಪಡಿಸಿದ್ದಾರೆ. 
 
ಕೇಂದ್ರ ಸರ್ಕಾರ ಮತ್ತು ಮಾನವ ಸಂಪನ್ಮೂಲ ಸಚಿವಾಲಯ ಚಿಹ್ನೆಗಳ ಮೇಲೆ ನಿರ್ದಿಷ್ಟ ಪ್ರೀತಿಯನ್ನು ಹೊಂದಿವೆ. ಪ್ರತೀಕವಾದ ವನ್ನು ನೀವು ಹೆಚ್ಚು ಕಾಲ ಕೊಂಡೊಯ್ಯಲಾಗದು. ವಿಶ್ವವಿದ್ಯಾಲಯ ವ್ಯವಸ್ಥೆಗೆ ಸಂಬಂಧಿಸಿದಂತೆ ನಾವು ಇದಕ್ಕಿಂತ ಹೆಚ್ಚು ಕಾಳಜಿ ತೋರಬೇಕಾದ ವಿಷಯಗಳನ್ನು ಹೊಂದಿದ್ದೇವೆ. ಸ್ವಾಯತ್ತತೆ, ತಾರತಮ್ಯ ಇವೇ ಮೊದಲಾದ ಗಂಭೀರ ವಿಷಯಗಳ ಬಗ್ಗೆ ಚರ್ಚೆಯೇ ನಡೆಯುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. 
 
ಜವಾಹಾರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದಂತಹ ಘಟನೆಗಳು ಬೇರೆಲ್ಲೂ ನಡೆಯಬಾರದು ಹಾಗೂ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಹೆಚ್ಚಿಸುವ ಉದ್ದೇಶದಿಂದ ಕೇಂದ್ರೀಯ ವಿಶ್ವ ವಿದ್ಯಾಲಯಗಳಲ್ಲಿ ರಾಷ್ಟ್ರಧ್ವಜ ಹಾರಾಟ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 

ವೆಬ್ದುನಿಯಾವನ್ನು ಓದಿ